ಕಿನ್ನಿಗೋಳಿ “ಆರಾಧಾನಾಚೆಂ ಚಾಪೆಲ್” ಉದ್ಘಾಟನೆ

Raghunath Kamath
ಕಿನ್ನಿಗೋಳಿ: ಕಿನ್ನಿಗೋಳಿ ಕೋಸೆಸಾಂವ್ ಅಮ್ಮನವರ ಇಗರ್ಜಿ ವಠಾರದಲ್ಲಿ ನಿರ್ಮಾಣಗೊಂಡ “ಆರಾಧಾನಾಚೆಂ ಚಾಪೆಲ್” ನ್ನು ಇತ್ತೀಚಿಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಎಲೋಶಿಯಸ್ ಪಾವ್ಲ್ ಡಿ’ಸೋಜ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚರ್ಚ್‌ನ 17 ವಾಳೆಗಳ ಗುರ್ಕಾರರು ಹಾಗೂ ಸದಸ್ಯರ ಹೆಸರುಗಳು ಒಳಗೊಂಡ “ವಳಕ್ ಡೈರೆಕ್ಟರಿ” ಪುಸ್ತಕವನ್ನು ಧರ್ಮಾಧ್ಯಕ್ಷರು ಬಿಡುಗಡೆಗೊಳಿಸಿದರು. ಕಿನ್ನಿಗೋಳಿ ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಅಲ್ಫ್ರೆಡ್ ಪಿಂಟೋ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ, ಉಪಾಧ್ಯಕ್ಷ ಲೈನಲ್ ಪಿಂಟೋ, ಕಾರ್ಯದರ್ಶಿ ವಲೇರಿಯನ್ ಸಿಕ್ವೇರಾ, ಕಿನ್ನಿಗೋಳಿ ವಲಯದ ಧರ್ಮಗುರುಗಳು, ಧರ್ಮಭಗಿನಿಯರು ಉಪಸ್ಥಿತರಿದ್ದರು.

Kinnigoli-07041307

Comments

comments

Leave a Reply

Read previous post:
ಪದ್ಮನೂರು ಸ. ಹಿ. ಪ್ರಾ. ಶಾಲೆ: ವಿದಾಯ ಕೂಟ

Raghunath Kamath ಕಿನ್ನಿಗೋಳಿ: ಪದ್ಮನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿಜಯಾ ಎಚ್ ಅವರ ವಿದಾಯ ಕೂಟ ಶನಿವಾರ...

Close