ಕಟೀಲು : ವಿಶ್ವಕರ್ಮ ಟ್ರೋಫಿ-2013

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಕ್ರಿಕೆಟ್ ಪಂದ್ಯಾಟ ವಿಶ್ವಕರ್ಮ ಟ್ರೋಫಿ-2013 ಭಾನುವಾರ ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಓಂ ಶ್ರೀ ಮೂಡಬಿದಿರೆ ತಂಡ ಪ್ರಥಮ ಸ್ಥಾನ ಶ್ರೀ ಕಟೀಲ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಓಂ ಶ್ರೀ ಮೂಡಬಿದಿರೆ ತಂಡದ ಸಂತೋಷ್ ಸರಣಿ ಶ್ರೇಷ್ಠ, ಪೈನಲ್ ಪಂದ್ಯದ ಪಂದ್ಯ ಶ್ರೇಷ್ಠ ವಿಘ್ನೇಶ್, ಶ್ರೀ ಕಟೀಲ್ ಫ್ರೆಂಡ್ಸ್ ತಂಡದ ಸುರೇಶ್ ಉತ್ತಮ ದಾಂಡಿಗ ಹಾಗೂ ಮಧು ಉತ್ತಮ ಎಸೆತಗಾರ ಪ್ರಶಸ್ತಿಗಳನ್ನು ಪಡೆದುಕೊಂಡರು.
ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ಸೂರ್ಯ ಕುಮಾರ್, ಕೊಲೆಕಾಡಿ ವಿಶ್ವ ಬ್ರಾಹ್ಮಣ ಸಂಘ ಅಧ್ಯಕ್ಷ ಸುಧೀರ್ ಕುಮಾರ್, ಉದ್ಯಮಿ ಶೈಲೇಶ್ ಆಚಾರ್ಯ, ಕಟೀಲ್ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಟೀಮ್ ಅಧ್ಯಕ್ಷ ಕೇಶವ ಕಟೀಲ್, ಉದ್ಯಮಿ ಪ್ರಥ್ವಿರಾಜ ಆಚಾರ್ಯ, ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಕಾರ್ಯದರ್ಶಿ ಉದಯಕುಮಾರ್, ಕ್ರೀಡಾ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಮಲ್ಲಿಗೆಯಂಗಡಿ, ಕೆ.ಬಿ. ಸುರೇಶ್, ಪ್ರಭಾಕರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041302

Kinnigoli-08041303

Comments

comments

Leave a Reply

Read previous post:
ಕಟೀಲು : ಬೇಸಿಗೆ ಶಿಬಿರ

Raghunath Kamath ಕಿನ್ನಿಗೋಳಿ: "ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳ ಗಮನ ಅತ್ಯಗತ್ಯ. ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಪರಿಣಾಮಕಾರಿಯಾಗುತ್ತದೆ." ಎಂದು ಕಟೀಲು ದೇವಳ ಅರ್ಚಕ...

Close