ಶಿಮಂತೂರು ಉಚಿತ ಬೇಸಿಗೆ ಶಿಬಿರ

Vishwanath Rao

ನಿರಂತರ ಭಜನೆಯಿಂದ ಭಗವಂತನ ಸಾಕ್ಷಾತ್ಕಾರ , ಮಾನಸಿಕ ನೆಮ್ಮದಿ ಸಿಗುತ್ತದೆ. ಭಾರತೀಯ ಸಂಸ್ಕೃತಿಯ ಅರಿವು ಮಕ್ಕಳಲ್ಲಿ ಮೂಡಿಸಬೇಕು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಭಾನುವಾರ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಯೋಜಿಸಿದ ೪೩ ದಿನಗಳ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.

ಪದ್ಮಾವತಿ ಹರಿಪೂಂಜ ಶಿಬಿರ ಉದ್ಘಾಟಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್, ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ವಿದ್ವಾನ್ ರಾಮಚಂದ್ರ ಭಟ್, ಭಜನಾ ಸಂಕೀರ್ತನಕಾರ ನರಸಿಂಹ ಭಾಗವತ್ ಮುಲ್ಕಿ ಉಪಸ್ಥಿತರಿದ್ದರು.

ದೇವಸ್ಥಾನದ ಅರ್ಚಕ ಪುರುಷೋತ್ತಮ ಭಟ್ ಪ್ರಾರ್ಥಿಸಿದರು. ಮೋಹನ್ ಸುವರ್ಣ ಸ್ವಾಗತಿಸಿ, ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Mulki-08041301

Mulki-08041302

Mulki-08041303

Comments

comments

Leave a Reply

Read previous post:
ಗಿಡಿಗೆರೆ – ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಶ್ರೀ ದುರ್ಗಾಂಬಿಕ ಯುವಕ ಯುವತಿ ಮಂಡಲ ಹಾಗೂ ಶ್ರೀ ದೇವಿ ಪ್ರಸಾದಿತಾ ಭಜನಾ ಮಂಡಳಿ ಗಿಡಿಗೆರೆ ಕಟೀಲು ಯುವಕ ಮಂಡಲದ ೩೫ನೇ ವರ್ಷಾಚರಣೆಯ ಪ್ರಯುಕ್ತ ೫೦ನೇ...

Close