ಕಟೀಲು : ವಿಪ್ರ ಪ್ರಾಂತೀಯ ಸಮಾವೇಶ

ಕಿನ್ನಿಗೋಳಿ: ಬ್ರಾಹ್ಮಣ ಸಮಾಜ ಬಾಂಧವರು ಸಂಘಟಿತರಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಸಹಾಯ ಹಸ್ತ ನೀಡಿ ಪ್ರೋತ್ಸಾಹ ನೀಡದರೆ ಔದ್ಯೋಗಿಕವಾಗಿ ಭವಿಷ್ಯದ ಯುವ ಜನಾಂಗವನ್ನು ಸೂಕ್ತ ಮಾರ್ಗದರ್ಶನದಲ್ಲಿ ಬೆಳೆಸಬಹುದು ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ. ಆರ್ ವಾಸುದೇವ ರಾವ್ ಹೇಳಿದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾ ಭವನದಲ್ಲಿ ಮಂಗಳವಾರ ನಡೆದ ವಿಪ್ರ ಪ್ರಾಂತೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಸಮಾಜದಲ್ಲಿ ಎಲ್ಲಾ ವರ್ಗದ ಜನರಲ್ಲಿ ಪೂಜ್ಯ ಭಾವನೆವಿರುವ ಬ್ರಾಹ್ಮಣ ವರ್ಗದಲ್ಲಿ ಸಂಘಟನೆಯ ಕೊರತೆಯಿದ್ದು ಅದನ್ನು ಕರಾವಳಿಯಿಂದ ಪ್ರಾರಂಭಿಸಿ ವಿಶ್ವದೆಲ್ಲಡೆ ಪಸರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.

“ವಿಪ್ರ ಸಮಾಜದಲ್ಲಿ ಮಹಿಳೆಯರ ಪಾತ್ರ” ದ ಬಗ್ಗೆ ಜಯಲಕ್ಷ್ಮೀ ಕಾರಂತ ಮಂಗಳೂರು ಉಪನ್ಯಾಸ ನೀಡಿ ಧಾರ್ಮಿಕತೆಯಲ್ಲಿ ಬ್ರಾಹ್ಮಣ ಮಹಿಳೆಯರು ತಮ್ಮದೇ ಆದ ಸಂಪ್ರದಾಯವನ್ನು ಕಟ್ಟಿಕೊಂಡಿದ್ದು ಅದರ ಪರಿಣಾಮ ಶಿಸ್ತಿನ ಜೀವನಕ್ಕೆ ಮಹಿಳೆಯರು ಇಂದಿಗೂ ತೊಡಗಿಸಿಕೊಂಡಿದ್ದಾರೆ. ಮಹಿಳಾ ಶಕ್ತಿಯಿಂದ ಸಾಮಾಜಿಕ ಕಷ್ಟಗಳನ್ನು ಮನೆಯ ಚೌಕಟ್ಟಿನ ನಡುವೆಯೂ ಸಾಧನೆ ಮಾಡುವಂತಹ ದಿಟ್ಟತನ ತೋರಬೇಕಾಗಿದೆ ಎಂದರು.

ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್, ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಡಾ| ಪದ್ಮನಾಭ ಭಟ್ ಎಕ್ಕಾರು, ಕಾವೂರು ಮಹಾಲಿಂಗೇಶ್ವರ ದೇವಳ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್, ವಿಪ್ರ ಸಮಾಜ ಬಜ್ಪೆ ವಲಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ಕಟೀಲು ವಲಯ ಅಧ್ಯಕ್ಷ ವೇದವ್ಯಾಸ ಉಡುಪ, ಪುನರೂರು ವಲಯ ಅಧ್ಯಕ್ಷ ಸುರೇಶ್ ರಾವ್, ತಾಳಿಪಾಡಿ ಎಳತ್ತೂರು ವಲಯ ಅಧ್ಯಕ್ಷ ರಾಜ್ ಕುಮಾರ್ ಭಟ್, ಸೂರಿಂಜೆ ವಲಯ ಅಧ್ಯಕ್ಷ ಶ್ರೀಧರ ಉಡುಪ, ಉಪಸ್ಥಿತರಿದ್ದರು.
ವಿಶ್ವೇಶ ಭಟ್ ಪ್ರಾರ್ಥಿಸಿದರು. ಕರಾವಳಿ ಜಿಲ್ಲಾ ಬ್ರಾಹ್ಮಣ ಸಂಘ ಗೌರವಾಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸ್ತಾವನೆಗೈದು ಸ್ವಾಗತಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಕಾರ್ಯಕ್ರಮ ನಿರೂಪಿಸಿದರು. ಪಿ ಸತೀಶ್ ರಾವ್ ವಂದಿಸಿದರು.

Kinnigoli09041301

Kinnigoli09041302

Comments

comments

Leave a Reply

Read previous post:
ಕಟೀಲು : ವಿಶ್ವಕರ್ಮ ಟ್ರೋಫಿ-2013

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಕ್ರಿಕೆಟ್ ಪಂದ್ಯಾಟ ವಿಶ್ವಕರ್ಮ ಟ್ರೋಫಿ-2013 ಭಾನುವಾರ ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ...

Close