ಮೂಡಬಿದಿರೆ ವಿಧಾನಸಭಾ ಕ್ಷೇತ್ರ

ಕಾಂಗ್ರೇಸ್-ಅಭಯಚಂದ್ರ, ಜೆಡಿಎಸ್-ಅಮರನಾಥ ಶೆಟ್ಟಿ, ಬಿಜೆಪಿಯಲ್ಲಿ ಬಿಲ್ಲವರು ಯಾರು..?

ಈ ವರ್ಷ ಚುನಾವಣೆಯ ವರ್ಷವೆಂದೇ ಗುರುತಿಸಲಾಗಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬೆನ್ನಿಗೆ ರಾಜ್ಯದ ಚುಕ್ಕಾಣಿ ಹಿಡಿಯುವ ವಿಧಾನಸಭಾ ಚುನಾವಣೆಗೆ ಕ್ಷಣ ಗಣನೆ ಆಗಲಿದೆ. ಕರಾವಳಿಯ ಪ್ರಮುಖ ಕ್ಷೇತ್ರವಾಗಿರುವ ಮೂಲ್ಕಿ ಮೂಡಬಿದಿರೆ ಕ್ಷೇತ್ರವು ಈ ಬಾರಿ ಭಾರೀ ಕುತೂಹಲ ಹುಟ್ಟಿಸುವ ಕ್ಷೇತ್ರವಾಗಿ ಪರಿಗಣಿಸಿದ್ದು ಜಿಲ್ಲೆಯ ರಾಜಕೀಯ ಅಖಾಡಕ್ಕೆ ಈಗಾಗಲೇ ಚುನಾವಣಾ ತಯಾರಿಯನ್ನು ಎಲ್ಲಾ ಪ್ರಮುಖ ಪಕ್ಷಗಳು ಈ ಕ್ಷೇತ್ರದಲ್ಲಿ ನಡೆಸುತ್ತಿದೆ.
ಕ್ಷೇತ್ರದ ಹಾಲಿ ಶಾಸಕ ಅಭಯಚಂದ್ರರವರು ತಮ್ಮ ನಿರಂತರ ಗೆಲುವಿನ ಮೂಲಕ ಈ ಬಾರಿಯೂ ಕಾಂಗೇಸ್ಸಿನಿಂದ ಏಕೈಕ ಉಮೇದುವಾರಿಕೆ ಅಭ್ಯರ್ಥಿಯಾಗಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಜೆಡಿಎಸ್‌ನ ಪ್ರಭಾವವನ್ನು ತನ್ನ ವೈಯಕ್ತಿಕ ವರ್ಚಸ್ಸಿನಿಂದ ಗುರುತಿಸಿಕೊಂಡಿರುವ ಅಮರನಾಥ ಶೆಟ್ಟರೇ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಈಗಿರುವುದು ಬಿಜೆಪಿಯ ಉಮೇದುವಾರಿಕೆಯ ಪ್ರಶ್ನೆ ಅಭ್ಯರ್ಥಿ ಯಾರು ಎಂದು ಎಲ್ಲಾ ಪಕ್ಷಗಳ ಸಹಿತ ಬಿಜೆಪಿ ಕಾರ್ಯಕರ್ತರಲ್ಲಿ ಮನ ಮಾಡಿದೆ.
ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಹು ಸಂಖ್ಯಾತರಾಗಿರುವ ಬಿಲ್ಲವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಈಗಾಗಲೇ ಬಿಲ್ಲವ ಸಂಘಟನೆಯ ಸಮಿತಿಯೊಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಬಹಿರಂಗವಾಗಿ ಮನವಿ ಮಾಡಿದ್ದು ಅದನ್ನು ಯಾವುದೇ ಪಕ್ಷಗಳು ಗಣನೆಗೆ ತೆಗದುಕೊಳ್ಳದಿದ್ದಲ್ಲಿ ಬಿಲ್ಲವ ಅಭ್ಯರ್ಥಿಯನ್ನು ಸ್ವತಂತ್ರವಾಗಿ ನಿಲ್ಲಿಸಿ ಚುನಾವಣೆಯ ಕಣದಲ್ಲಿ ಅತಂತ್ರತೆಯನ್ನು ತರುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. .
ಈ ನಡುವೆ ಬಿಜೆಪಿಯು ಈ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕು ಸತತ ಪ್ರಯತ್ನ ಪಡುತಿದ್ದು. ಬಿಲ್ಲವ ಸಮಾಜದವರಿಗೆ ಅವಕಾಶ ನೀಡಿದಲ್ಲಿ ಕ್ಷೇತ್ರದಲ್ಲಿ ಪ್ರಥಮವಾಗಿ ಬಿಜೆಪಿ ಪತಾಕೆ ಹಾರಬಹುದು ಎಂದು ಸಂಘ ಪರಿವಾರ ಪ್ರಮುಖರು ದೀರ್ಘ ಚರ್ಚೆಯಲ್ಲಿದ್ದಾರೆ.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಹಿಂದೂ ಸಂಘಟನೆ ನಾಯಕ ಸತ್ಯಜಿತ್ ಸುರತ್ಕಲ್, ಬಿಜೆಪಿಯ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೂಡಬಿದಿರೆಯ ಸುದರ್ಶನ್ ಅವರ ಹೆಸರು ಈಗ ಚಲಾವಣೆಯಲ್ಲಿದೆ. ಇದರಲ್ಲಿ ಉಮಾನಾಥ ಕೋಟ್ಯಾನ್ ಮುಂಚೂಣಿಯಲ್ಲಿದ್ದು ಇವರಿಗೆ ಈ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯ ಚುನಾವಣಾ ಉಸ್ತುವಾರಿಯನ್ನು ವಹಿಸಿದ್ದರಿಂದ ಅನುಕೂಲವಾಗಿದೆ ಎಂದು ಪಕ್ಷದ ಪ್ರಮುಖರ ಅನಿಸಿಕೆಯಾಗಿದೆ. ಮುಲ್ಕಿ ಕಿನ್ನಿಗೋಳಿ ಪರಿಸರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಮೂಡಬಿದಿರೆಗೆ ಮಾತ್ರವಲ್ಲ ಮುಲ್ಕಿಗೂ ಪ್ರಾಶಸ್ಯ ದೊರಕಬಹುದು ಎಂಬುದು ಕೆಲವರ ಅಂಬೋಣ.
ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿಯಿಂದ ಅವಿರತವಾಗಿ ಮೂರು ಬಾರಿ ಸ್ಪರ್ಧಿಸಿ ಸೋತಿದ್ದ ಬಿಲ್ಲವ ಸಮಾಜದ ಎಂ.ಎಸ್.ಕೋಟ್ಯಾನ್, ಕಾಂಗ್ರೇಸ್ಸಿನ ಸೋಮಪ್ಪ ಸುವರ್ಣ ಮತ್ತು ಡಾ. ದಾಮೋದರ್ ಮೂಲ್ಕಿಯವರು ಮಾತ್ರ ಈ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಶಾಸಕರಾಗಿ ಆಯ್ಕೆಯಾಗಿದ್ದು ಹೆಚ್ಚಾಗಿ ಕಾಂಗ್ರೇಸ್ಸನ್ನೆ ಬಿಲ್ಲವರು ಬೆಂಬಲಿಸಿದ್ದರು. ಆದರೆ ಈ ಬಾರಿ ಮಾತ್ರ ಬಿಲ್ಲವರಿಗೆ ಸ್ಥಾನ ಬೇಕು ಎಂಬ ಕೂಗು ಕ್ಷೇತ್ರದ ಉದ್ದಗಲಕ್ಕೂ ಕೇಳಿ ಬರುತ್ತಿದೆ.

ಬಿಜೆಪಿಯಲ್ಲಿ ಅಂತಿಮವಾಗಿ ಅಭ್ಯರ್ಥಿ ನಿರ್ಧರಿಸುವ ಸಂಘ ಪರಿವಾರದ ಪ್ರಭಾಕರ ಕಲ್ಲಡ್ಕ ಅವರಲ್ಲಿ ಈಗ ಬಿಲ್ಲವರ ಸಮಿತಿಯ ದಂಡು ಭೇಟಿ ನೀಡಿ ಬಂದಿದ್ದು. ಅಲ್ಲಿಯೂ ಹಸಿರು ನಿಶಾನೆ ದೊರಕಿದ್ದು ಬಿಲ್ಲವರಲ್ಲಿನ ಸರ್ವ ಸಮ್ಮತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಗುಪ್ತ ಸಭೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ. ಕಾಂಗ್ರೇಸ್ಸಿನ ಶಾಸಕ ಅಭಯಚಂದ್ರರ ನಿರಂತರ ಗೆಲುವಿನ ಓಟಕ್ಕೆ ನಿಯಂತ್ರಣ ತರಲು ಬಿಜೆಪಿಯಿಂದ ಬಿಲ್ಲವರನ್ನು ಕಣಕ್ಕೆ ತನ್ನಿ ಎಂದು ಸ್ವತಹ ಬಿಜೆಪಿಯ ಅನೇಕ ಕಾರ್ಯಕರ್ತರು ಬಿಜೆಪಿ ವರಿಷ್ಠರಲ್ಲಿ ದುಂಭಾಲು ಬೀಳುತ್ತಿರುವುದು. ಸಹ ಗುಪ್ತವಾಗಿ ನಡೆದಿದೆ. ಮೂಲ್ಕಿ ಮೂಡಬಿದಿರೆ ಕ್ಷೇತ್ರ ಈಗ ಚುನಾವಣೆಯ ಮೊದಲೇ ಕುತೂಹಲ ಕೆರಳಿಸಿದೆ.

Comments

comments

Leave a Reply

Read previous post:
ಕೆಮ್ರಾಲ್ ವಲಯ ಕಾಂಗ್ರೆಸ್ ಚುನಾವಣಾ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಕೆಮ್ರಾಲ್ ವಲಯ ಕಾಂಗ್ರೇಸ್ ಚುನಾವಣಾ ಕಛೇರಿಯನ್ನು ಮುಲ್ಕಿ ಬ್ಲಾಕ್ ಕಾಂಗ್ರೇಸ್ ನೂತನ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್ ಮುಲ್ಕಿ ಮಂಗಳವಾರ ಪಕ್ಷಿಕೆರೆಯಲ್ಲಿ ಉದ್ಘಾಟಿಸಿದರು. ಶಾಸಕ ಕೆ....

Close