ಸಂಸ್ಥೆಗಳು ಸಮಾಜದ ಬೆನ್ನೆಲುಬಾಗಬೇಕು

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಕೇವಲ ಮನರಂಜನೆಗಾಗಿ ಕಾರ್ಯಚರಿಸದೆ ಸಮಾಜದ ಒಳಿತು ಹಾಗೂ ಏಳಿಗೆಗೆ ಬೆನ್ನೆಲುಬಾಗಿದ್ದು ಶ್ರಮಿಸಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಭಾನುವಾರ ಕಿನ್ನಿಗೋಳಿಯ ಗೋಳಿಜೋರ ಶ್ರೀ ರಾಮ ಯುವಕ ವೃಂದದ 27ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭ ಶಿಮಂತೂರು ನಿವೃತ್ತ ಶಾಲಾ ಶಿಕ್ಷಕಿ ಕಾತ್ಯಾಯನಿ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ ಹೆಗ್ಡೆ, ಪಂಚಾಯಿತಿ ಸದಸ್ಯ ಟಿ. ಎಚ್. ಮಯ್ಯದ್ದಿ, ಸಂಘದ ಗೌರವ ಸಲಹೆಗಾರ ಸುಧಾಕರ ಶೆಟ್ಟಿ, ಉದ್ಯಮಿ ಪುರಂದರ ಶೆಟ್ಟಿಗಾರ್, ಶಿಮಂತೂರು ಶಾಲಾ ಶಿಕ್ಷಕ ಉಮೇಶ್ ಎನ್. ಸಂಘದ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಮನೋಜ್ ಕುಮಾರ್ ವರದಿ ವಾಚಿಸಿದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10041301

Comments

comments

Leave a Reply

Read previous post:
ನಿಡ್ಡೋಡಿ ಬಸಲಡ್ಕ: ವಿಶ್ವೇಶ್ವರ ಭಟ್ ಸನ್ಮಾನ

ನಿಡ್ಡೋಡಿ : ಸೋಮವಾರ ನಿಡ್ಡೋಡಿ ಬಸಲಡ್ಕದಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಕಟೀಲು ಮೇಳದ ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ಕಟೀಲು...

Close