ಇಂದಿರಾನಗರ : ನ್ಯೂ ಫ್ರೆಂಡ್ಸ್ ಟ್ರೋಫಿ – 2013

ಹಳೆಯಂಗಡಿ : ಇಂದಿರಾ ನಗರ ನ್ಯೂ ಫ್ರೆಂಡ್ಸ್ ಎಸೋಸಿಯೇಷನ್ (ರಿ) ಆಶ್ರಯದಲ್ಲಿ ಹೊನಲು ಬೆಳಕಿನ 60 ಗಜಗಳ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನ್ಯೂ ಫ್ರೆಂಡ್ಸ್ ಟ್ರೋಫಿ-2013ಶನಿವಾರ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಿತು.
ಮೂಕಾಂಬಿಕ ಚೆಳ್ಯಾರ್ ತಂಡ ಪ್ರಥಮ ಸ್ಥಾನ ಹಾಗೂ ಜೈಮಾತಾ ಕುಳಾಯಿ ತಂಡ ದ್ವಿತೀಯ ಸ್ಥಾನ ಗಳಿಸಿತು.
ಮೂಕಾಂಬಿಕ ಚೆಳ್ಯಾರ್ ತಂಡದ ಶ್ರೇಯಸ್ ಸರಣಿ ಶ್ರೇಷ್ಠ, ಪೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಯತೀಶ್, ಅಜೇಯ್ ಉತ್ತಮ ಎಸೆತಗಾರ, ಜೈಮಾತಾ ಕುಳಾಯಿ ತಂಡದ ರೋಶನ್ ಉತ್ತಮ ದಾಂಡಿಗ ಪ್ರಶಸ್ತಿಗಳನ್ನು ಪಡೆದುಕೊಂಡರು.
ಉದಯ ಕುಮಾರ್, ಜಯಕರ್ನಾಟಕದ ರಫೀಕ್ ಸಾಗ್, ಸೀತರಾಮ ಲೈಟ್ ಹೌಸ್, ಕಬೀರ್, ನ್ಯೂ ಫ್ರೆಂಡ್ಸ್ ಎಸೋಸಿಯೇಷನ್ ಅಧ್ಯಕ್ಷ ಇಮ್ರಾನ್, ಉಪಾಧ್ಯಕ್ಷ ಜಿಲಾನಿ, ನ್ಯೂ ಫ್ರೆಂಡ್ಸ್ ಎಸೋಸಿಯೇಷನ್ ಕ್ರಿಕೆಟ್ ತಂಡದ ನಾಯಕ ಶಬೀರ್ ಮತ್ತಿತರು ಉಪಸ್ಥಿತರಿದ್ದರು.

Kinnigoli-1404201301

Kinnigoli-1404201302

Comments

comments

Leave a Reply

Read previous post:
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ದ್ವಜಾರೋಹಣ

ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ  ದ್ವಜಾರೋಹಣ ಇಂದು ನಡೆಯಿತು.

Close