ಆಧಾರ್ ನೋಂದಣಿಗಾಗಿ ಕಾದು ದಣಿದ ಗ್ರಾಮಸ್ಥರು

Bhagyavan Sanil

ಮೂಲ್ಕಿ: ಮೈಲೊಟ್ಟಿನಲ್ಲಿ ’ಆಧಾರ್”ಗಾಗಿ ನೂಕುನುಗ್ಗಲು.
ಮುಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮೈಲೊಟ್ಟು ಗ್ರಾಮದಲ್ಲಿ ಆಧಾರ್ ಗುರುಟಿನ ಚೀಟಿಗಾಗಿ ನೂಕುನುಗ್ಗಲು ನಡೆದಿದ್ದು ಆಧಾರ್ ಅಧಿಕಾರಿಗಳು ಮತದಾರರನ್ನು ನಿಯಂತ್ರಿಸಲು ತ್ರಾಸಪಟ್ಟ ಘಟನೆ ನಡೆದಿದೆ. ಶನಿವಾರದಿಂದ ಸೋಮವಾರದವರೆಗೆ ಮೈಲೊಟ್ಟು ಶಾಲೆಯಲ್ಲಿ ಆಧಾರ್ ಗುರುತಿನ ಚೀಟಿಯ ವ್ಯವಸ್ಥೆ ಮಾಡಿದ್ದು ಅಧಿಕಾರಿಗಳು ಶನಿವಾರ ಬರುವಾಗಲೇ ಮಧ್ಯಾಹ್ನ ಕಳೆದಿದ್ದು ಬೆಳಿಗ್ಗೆಯೇ ಗುರುತುಚೀಟಿಗಾಗಿ ಬಂದ ಮತದಾರರು ಸುಸ್ತಾಗಿ ಮರಳಿದ್ದರೆ ಕೆಲವರು ಅಲ್ಲಿಕಾದು ಕುಳಿತಿದ್ದರು. ಕೊನೆಗೂ ಅಧಿಕಾರಿಗಳ ಆಗಮನವಾಗಿ ಮೂರು ವಿಭಾಗಗಳನ್ನು ಮಾಡಿ ಆಧಾರ್ ಕೆಲಸ ಶುರುವಾಯಿತು.ಆದರೆ ನಿನ್ನೆ ಆದಿತ್ಯವಾರ ರಜಾದಿನವಾದ್ದರಿಂದ ಆಧಾರ್ ಚಾಲೂ ಇದ್ದು ಮತದಾರರ ನೂಕುನುಗ್ಗಲು ಕಂಡು ಬಂದಿತ್ತು. ಕೊನೆಗೆ ಕಿಲ್ಪಾಡಿ ಪಂಚಾಯತ್ ಸದಸ್ಯ ಮನೋಹರ ಕೋಟ್ಯಾನ್ ಆಗಮನದಿಂದ ಪರೀಸ್ಥಿತಿ ತಿಳಿಗೊಂಡು ಆಧಾರ್ ನೋಂದಣಿ ನಡೆಯಿತು.

Mulki-15041303

Comments

comments

Leave a Reply

Read previous post:
ಮೂಲ್ಕಿ: ಕಿರುಸೇತುವೆ ಆಳಕ್ಕೆ ಮಗುಚಿ ಬಿದ್ದ ಲಾರಿ

Bhagyavan Sanil ಮೂಲ್ಕಿ : ಮಂಗಳೂರಿನಿಂದ ಗೋವಾಕ್ಕೆ ಕಬ್ಬಿಣ ಗುಜರಿ ತುಂಬಿಸಿ ಹೊರಡಿದ್ದ ಲಾರಿಯೊಂದು ಎದುರಿನಿಂದ ಅತೀ ವೇಗದಲ್ಲಿ ಬಂದ ವಾಹನವನ್ನು ತಪ್ಪಿಸುವ ಭರದಲ್ಲಿ ಮೂಲ್ಕಿ ಬಪ್ಪನಾಡು...

Close