ಶ್ರೀ ವ್ಯಾಸಮಹರ್ಷಿ ಸಂಸ್ಕೃತ ವೇದ ಪಾಠ ಶಾಲಾ ವಾರ್ಷಿಕೋತ್ಸವ

Bhagyavan Sanil
ಮೂಲ್ಕಿ: ಪುರೋಹಿತರಾಗ ಬಯಸುವವರು ತಮ್ಮಸತ್ಕರ್ಮ ಮತ್ತು ಸದಾಚಾರಗಳಿಂದ ಊರಿನ ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಸೇವಾ ಮನೋಭಾವನೆಯಿಂದ ಜೀವಿಸಬೇಕು ಎಂದು ಉಚ್ಚಿಲ ಶ್ರೀ ರಾಘವೇಂದ್ರ ಮಠದ ಹಿರಿಯ ಪುರೋಹಿತ ರತ್ನ ವೇ. ಮೂ. ಶ್ರೀನಿವಾಸ ಭಟ್ ಹೇಳಿದರು.
ಸೋಮವಾರ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಸಂಸ್ಕೃತ ವೇದ ಪಾಠ ಶಾಲೆಯ ವಾರ್ಷಿಕೋತ್ಸವ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪುರೋಹಿತರು ಯಾವತ್ತೂ ವಿದ್ಯಾಗ್ರಾಹಿಗಳಾಗಿ ತಮ್ಮಸರಳ ನೈತಿಕ ಜೀವನ ಕ್ರಮಗಳಿಂದ ಇತರರಿಗೆ ಮಾದರಿ ವ್ಯಕ್ತಿಗಳಾಗಿ ಜೀವನ ಸಫಲತೆಯನ್ನು ಕಂಡುಕೊಳ್ಳಬೇಕು ಎಂದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ ಶತಾವಧಾನಿ ಉಡುಪಿ ರಾಮಾನಾಥ ಆಚಾರ್ಯರವರು ಮಾತನಾಡಿ,ಪರ ಅಪರ ವಿದ್ಯೆಗಳಲ್ಲಿ ನಾಶವಾಗದ ಮತ್ತು ನಾಶ ಮಾಡದ ವಿದ್ಯೆ ಯಾವತ್ತು ಪರ ವಿದ್ಯೆಯಾಗಿದ್ದು ಅದನ್ನು ಕಲಿತು ಬೆಳೆಯುದರೊಂದಿಗೆ ಪುರೋಹಿತರು ಧರ್ಮ ಸಹಿಷ್ಣುಗಳು ಮತ್ತು ಸಮಾಜದ ಶ್ರೇಯೋಭಿವೃದ್ಧಿಯ ಚಿಂತಕರಾಗಿ ಬೆಳೆಯಬೇಕು ಎಂದರು.
ಆಳ್ವಾಸ್ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗ ಮುಖ್ಯಸ್ಥ ಯು.ರವೀಂದರ ಶೆಣೈ ಮಾತನಾಡಿ, ಕಲಿತ ವಿದ್ಯೆಗಳನ್ನು ದೈನ್ಯಂದಿನ ಜೀವನದಲ್ಲಿ ಪುನಃ ಮನನ ಮಾಡುವುದರೊಂದಿಗೆ ಉನ್ನತ ವಿದ್ಯಾಬ್ಯಾಸ ಮತ್ತು ವಿದ್ಯಾದಾನ ನಡೆಸುವ ಧ್ಯೇಯವಿರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ಅಧ್ಯಕ್ಷ ಎಂ.ನರಸಿಂಹ ನಾಯಕ್ ವಹಿಸಿದ್ದರು. ಸಂಚಾಲಕ ಧೃವ ಕಾಮತ್,ಮೂಲ್ಕಿ ವಿಜಯಾ ಕಾಲೇಜು ಸಂಸ್ಕೃತ ಪ್ರಾದ್ಯಾಪಕ ಬಿ.ಜಯರಾಮ್,ದಾನಿ ವಿಶ್ವನಾಥ ಎನ್.ಶೆಣೈ ಮುಂಬೈ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ.ನಾಗೇಶ್ ಶೆಣೈ ಸ್ವಾಗತಿಸಿದರು. ನರಸಿಂಹ ಭಟ್ ವಂದಿಸಿದರು.

Kinnigoli-16041302

Comments

comments

Leave a Reply

Read previous post:
ಕುಜಿಂಗಿರಿ : ಯಕ್ಷಾಂಜಲಿ-2013

Raghunath Kamath ಕಿನ್ನಿಗೋಳಿ: ಶ್ರೀ ಪತಾಂಜಲಿ ಯೋಗ ಅಧ್ಯಯನ ಮಂದಿರ ಕುಜಿಂಗಿರಿ ಹಾಗೂ ಗಮ್ಮತ್ ಕಲಾವಿದೆರ್ ಕುಜಿಂಗಿರಿ ಜಂಟೀ ಆಶ್ರಯದಲ್ಲಿ 2ನೇ ವರ್ಷದ "ಯಕ್ಷಾಂಜಲಿ-2013" ಯುಗಾದಿ ಸಂಭ್ರಮಾಚರಣೆ ಶನಿವಾರ...

Close