ಕಿನ್ನಿಗೋಳಿ : 22ನೇ ಬೃಹತ್ ಯೋಗ ಆರೋಗ್ಯ ಶಿಬಿರ

Kinnigoli-17041302

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಶಾಂತಿ ವನ ಟ್ರಸ್ಟ್ (ರಿ) ಧರ್ಮಸ್ಥಳ ಮತ್ತು ಕಿನ್ನಿಗೋಳಿ ಸಮೀಪದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗೆಡೆ ಅವರ ಮಹತ್ವದ ಕಾರ್ಯಕ್ರಮ 22ನೇ ಬೃಹತ್ ಯೋಗ ಆರೋಗ್ಯ ಶಿಬಿರ ಎಪ್ರಿಲ್ 18ರಿಂದ ಎಪ್ರಿಲ್ 24 ರವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಸುಮಾರು 22 ಕೇಂದ್ರಗಳಲ್ಲಿ ಸುಮಾರು 2000 ಶಿಬಿರಾರ್ಥಿಗಳ ಉಪಸ್ಥಿತಿಯಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ.
ಮೆನ್ನಬೆಟ್ಟು- ಸರಕಾರಿ ಶಾಲೆ ನಡುಗೋಡು, ಸರಕಾರಿ ಶಾಲೆ ಉಲ್ಲಂಜೆ, ಮಹಕಾಳಿ ದೈವಸ್ಥಾನ ಗಿಡಿಗೆರೆ, ಎಕ್ಕಾರು- ಕುಂಭ ಕಂಠಿಣೀ ದೈವಸ್ಥಾನ,
ಐಕಳ – ಏಳಿಂಜೆ ಲಕ್ಷ್ಮೀಜನಾರ್ಧನ ದೇವಸ್ಥಾನ, ಸರಕಾರಿ ಶಾಲೆ ಐಕಳ, ಜಾರಂದಾಯ ಕ್ರಿಕೆಟರ‍್ಸ್ ಪಟ್ಟೆ , ಕಿನ್ನಿಗೋಳಿ – ಯುಗಪುರುಷ ಸಭಾಭವನ, ಪುನರೂರು ದೇವಸ್ಥಾನ, ಮೂಕಾಂಬಿಕಾ ದೇವಸ್ಥಾನ ಗುತ್ತಕಾಡು ಶಾಂತಿ ನಗರ, ಸರಕಾರಿ ಶಾಲೆ ಗೋಳಿಜೋರ, ಬಳ್ಕುಂಜೆ – ಸರಕಾರಿ ಶಾಲೆ ಕೊಲ್ಲೂರು, ಸರಕಾರಿ ಶಾಲೆ ಕರ್ನಿರೆ, ವಿಠೋಬ ರುಕುಮಾಯಿ ಭಜನಾಮಂದಿರ, ಕೆಮ್ರಾಲ್ – ಪದ್ಮನೂರು ಬಯಲಾಟ ಸಮಿತಿ ಸಭಾ ಭವನ, ಹೊಸಕಾಡು ಸಭಾ ಭವನ, ಕೆಮ್ರಾಲ್ ಕೋರ‍್ದಬ್ಬು ದೈವಸ್ಥಾನ ಅತ್ತೂರು, ಅರಸು ಕುಂಜಿರಾಯ ದೈವಸ್ಥಾನ ಅತ್ತೂರು, ಕಾರ್ನಾಡು- ನಾರಾಯಣ ಗುರು ಸಭಾ ಭವನ ಕೆ.ಎಸ್. ರಾವ್ ನಗರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Leave a Reply

Read previous post:
ಪುಸ್ತಕ ಬಿಡುಗಡೆ

ಕಿನ್ನಿಗೋಳಿ: ಕಟೀಲು ದೇವಳ ಹಾಗೂ ಸಂಜೀವನೀ ಟ್ರಸ್ಟ್ ಆಶ್ರಯದಲ್ಲಿ ಕಟೀಲು ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ನಡೆಯಿತು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿ ಮನು ಕಶ್ಯಪ್ ಬರೆದ...

Close