ಕರ್ಮ ಮಾರ್ಗ ರೂಡಿಸಿ : ಡಾ| ಎಕ್ಕಾರು ಪದ್ಮನಾಭ ಭಟ್

ಕಿನ್ನಿಗೋಳಿ: ಮಾನಸಿಕ ಒತ್ತಡಗಳು ಬರದಂತೆ ನಮ್ಮ ಜೀವನ ರೂಪಿಸಿಕೊಳ್ಳಬೇಕು. ಭಕ್ತಿ ಮಾರ್ಗ ಅಲ್ಲದೆ ಕರ್ಮ ಮಾರ್ಗ ರೂಡಿಸಿಕೊಳ್ಳವುದು ನಮ್ಮ ಆದ್ಯ ಕರ್ತವ್ಯ ಎಂದು ಡಾ| ಎಕ್ಕಾರು ಪದ್ಮನಾಭ ಭಟ್ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಸೋಮವಾರ ಕಿನ್ನಿಗೋಳಿ ಸಹಕಾರ ಸೌಧದಲ್ಲಿ ಆಯೋಜಿಸಿದ “ಪರ್ಯಾಯ ಆರೋಗ್ಯ ಚಿಕಿತ್ಸೆ” ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಆರ್ಯುವೇದ, ಹೋಮಿಯೋಪಥಿ, ನಾಟಿ ವೈದ್ಯ, ಯೋಗ ದ್ಯಾನ, ರೇಖಿ, ಪ್ರಾಣಿಕ್ ಹೀಲಿಂಗ್, ಯುನಾನಿ, ನ್ಯಾಚುರೋಪಥಿ, ಅಕ್ಯುಪ್ರೆಶರ್, ಅಕ್ಯುಪಂಕ್ಚರ್, ಮುದ್ರಾವಿಜ್ಞಾನ, ಪಿರಮಿಡ್ ಥೆರಪಿ, ಕ್ರಿಸ್ಟಲ್ ಥೆರಪಿ ಬಗ್ಗೆ ಉಪನ್ಯಾಸ ನೀಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ನಿಕಟಪೂರ್ವ ಅಧ್ಯಕ್ಷ ಜಯರಾಮ ಪೂಂಜ, ನಿಯೋಜಿತ ಅಧ್ಯಕ್ಷ ರಾಬರ್ಟ್ ರೋಸಾರಿಯೊ, ಕಾರ್ಯದರ್ಶಿ ಯಶವಂತ ಐಕಳ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-17041303

 

Comments

comments

Leave a Reply

Read previous post:
ಕಿನ್ನಿಗೋಳಿ : 22ನೇ ಬೃಹತ್ ಯೋಗ ಆರೋಗ್ಯ ಶಿಬಿರ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಶಾಂತಿ ವನ ಟ್ರಸ್ಟ್ (ರಿ) ಧರ್ಮಸ್ಥಳ ಮತ್ತು ಕಿನ್ನಿಗೋಳಿ ಸಮೀಪದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಾ| ಡಿ....

Close