ನೆಲ್ಲಿತೀರ್ಥ : ಮಕ್ಕಳ ವಿಕಸನ ಶಿಬಿರ ಆರಂಭ

Yugapurusha
ಗ್ರಾಮೀಣ ಮಕ್ಕಳ ವ್ಯಕ್ತಿತ್ವ ಪ್ರತಿಭೆ ವಿಕಸನವಾಗಲು, ಅನಾವರಣಗೊಳ್ಳಲು ಅವಕಾಶ ಕಲ್ಪಿಸಿದಾಗ ಮಾತ್ರ ಸಮಾಜದಲ್ಲಿ ಅವರನ್ನು ಉತ್ತಮರನ್ನಾಗಿ ರೂಪಿಸಲು ಸಾಧ್ಯ. ಜತೆಗೆ ಮೂಲ ಸಂಸ್ಕಾರ ಹಾಗೂ ನಾಡಿನ ಸಂಸ್ಕೃತಿಯ ಬಗೆಗೆ ಮಕ್ಕಳಿಗೆ ಮಾಹಿತಿ ಮಾಡಬೇಕಾಗಿದೆ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಅವರು ಶ್ರೀ ಕ್ಷೇತ್ರ ನೆಲ್ಲಿತೀರ್ಥದಲ್ಲಿ ಗ್ರಾಮೀಣ ಮಕ್ಕಳಿಗಾಗಿ ಏರ್ಪಡಿಸಲಾದ ಒಂದು ವಾರದ ವಿಶಿಷ್ಟ ಬೇಸಿಗೆ ಶಿಬಿರ ’ತಿಳಿವಿನ ತೀರ್ಥ’ ಉದ್ಘಾಟಿಸಿ ಮಾತನಾಡಿದರು.

Kinnigoli-19041301

ಆರಂಭದಲ್ಲಿ ಪುಸ್ತಕ ಪೀಠದಲ್ಲಿ ಶಾರದೆಯ ಉತ್ಸವ ಮೂರ್ತಿಯ ಪ್ರದಕ್ಷಿಣೆ ಮೆರವಣಿಗೆ ಶಿಬಿರ ಸ್ಥಳಕ್ಕೆ ಆಗಮಿಸಿ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ಕ್ಷೇತ್ರ ನೆಲ್ಲಿತೀರ್ಥದ ಧರ್ಮದರ್ಶಿ ಪಿ. ಸುಬ್ರಾಯ ಭಟ್ ಉದ್ಘಾಟನಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಸಾಹಿತಿ ಬಾಲಕೃಷ್ಣ ಕತ್ತಲ್‌ಸಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಪುರುಷೋತ್ತಮ ಕೊಟ್ಟಾರಿ, ರಾಮಚಂದ್ರ ಕಾವ ಶಿಬಿರ ಸಂಚಾಲನಾ ಸಮಿತಿಯ ಕೃಷ್ಣಪ್ಪ ಕರ್ಕೇರ ಮುಂತಾದವರು ಉಪಸ್ಥಿತರಿದ್ದರು. ಸಂಧ್ಯಾ ಭಟ್ ಪ್ರಾರ್ಥಿಸಿ, ಶಿಬಿರ ಸಂಚಾಲಕ ಪ್ರಸನ್ನ ಭಟ್ ಸ್ವಾಗತಿಸಿದರು. ಶಿಬಿರಾಧಿಕಾರಿ ಭಾಸ್ಕರ ನೆಲ್ಲಿತೀರ್ಥ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಸಂತೋಷ ವಂದಿಸಿದರು. ಶಿಬಿರದಲ್ಲಿ ಸಂಗೀತ, ಸಾಹಿತ್ಯ, ನಾಟಕ, ಯಕ್ಷಗಾನ, ಮುಖವಾಡ ತಯಾರಿ, ಕ್ಲೆಮಾಡೆಲಿಂಗ್, ಪೇಪರ್ ಕ್ರಾಫ್ಟ್ ಬರವಣಿಗೆ, ಭಜನೆ, ಶ್ಲೋಕ ಅಲ್ಲದೇ ಸಂಸ್ಕಾರ ಶಿಕ್ಷಣ, ಜನಪದ, ಗ್ರಾಮೀಣ ಕ್ರೀಡೆಗಳು, ಕ್ಷೇತ್ರ ಅಧ್ಯಯನ ಇನ್ನಿತರ ವಿಷಯಗಳ ಬಗ್ಗೆ ಮಕ್ಕಳಿಗೆ ತರಬೇತಿ ನೀಡುವುದು ಈ ಶಿಬಿರದ ಧ್ಯೇಯ ಎಂದು ಶಿಬಿರಾಧಿಕಾರಿ ಭಾಸ್ಕರ ನೆಲ್ಲಿತೀರ್ಥ ತಿಳಿಸಿದ್ದಾರೆ.

Comments

comments

Leave a Reply

Read previous post:
ಕರ್ಮ ಮಾರ್ಗ ರೂಡಿಸಿ : ಡಾ| ಎಕ್ಕಾರು ಪದ್ಮನಾಭ ಭಟ್

ಕಿನ್ನಿಗೋಳಿ: ಮಾನಸಿಕ ಒತ್ತಡಗಳು ಬರದಂತೆ ನಮ್ಮ ಜೀವನ ರೂಪಿಸಿಕೊಳ್ಳಬೇಕು. ಭಕ್ತಿ ಮಾರ್ಗ ಅಲ್ಲದೆ ಕರ್ಮ ಮಾರ್ಗ ರೂಡಿಸಿಕೊಳ್ಳವುದು ನಮ್ಮ ಆದ್ಯ ಕರ್ತವ್ಯ ಎಂದು ಡಾ| ಎಕ್ಕಾರು ಪದ್ಮನಾಭ ಭಟ್...

Close