ಕಿನ್ನಿಗೋಳಿ- ಬಿಜೆಪಿ ಕಾರ್ಯಕರ್ತರ ಸಭೆ

ಕಿನ್ನಿಗೋಳಿ: ತಳ ಮಟ್ಟದ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯ ಆಧಾರ ಸ್ಥಂಭಗಳು, ಕಾರ್ಯಕರ್ತರೇ ಬಿಜೆಪಿಗೆ ಶ್ರೀರಕ್ಷೆ. ಅಭಿವೃದ್ಧಿ ನಮ್ಮ ಮೂಲ ಮಂತ್ರ, 5 ವರ್ಷಗಳಲ್ಲಿ ಜನಪರ ಕಾಳಜಿವುಳ್ಳ ಕೆಲಸ ಕಾರ್ಯಗಳನ್ನು ಬಿಜೆಪಿ ಸರಕಾರ ಜನರಿಗೆ ನೀಡಿದೆ ಎಂದು ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿಯಲ್ಲಿ ಬಾನುವಾರ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೇಸ್ ಪಕ್ಷದಿಂದ ಬೇಸರಗೊಂಡ ಗುತ್ತಕಾಡಿನ ಮುಸ್ಲಿಂ ಭಾಂದವರಾದ ನೂರುದ್ದಿನ್, ಖಾಲಿದ್, ಶಾಫಿ, ಆಶ್ರಫ್, ಹರ್ಷದ್, ಶೌಕತ್, ಹಸೈನಾರ್, ಶಬೀರ್, ಇರ್ಫಾನ್, ಬಶೀರ್ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭುವನಾಭಿರಾಮ ಉಡುಪ, ಮೂಲ್ಕಿ- ಮೂಡಬಿದ್ರೆ ಕ್ಷೇತ್ರಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಭೋಜ ರಾಜ ಶೆಟ್ಟಿ, ದಿವಾಕರ ಸಾಮಾನಿ, ಬಿಜೆಪಿ ಯುವ ಮೋರ್ಚಾದ ಪ್ರತೀಕ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರ್ ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಗುರುರಾಜ್ ಮಲ್ಲಿಗೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.
Kinnigoli-22041303

 

Comments

comments

Leave a Reply

Read previous post:
ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆ

ಕಿನ್ನಿಗೋಳಿ: ಪಂಜ ಕೊಯಿಕುಡೆ ಶ್ರೀ ಹರಿಪಾದ ಜಾರಂದಾಯ ಯುವಕ ಮಂಡಲದ 2013-14ನೇ ಸಾಲಿನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾದರು. ಗೌರವಾಧ್ಯಕ್ಷ ಪಂಜ ವಾಸುದೇವ ಭಟ್, ಉಪಾಧ್ಯಕ್ಷ ಲೋಕೇಶ್ ಅಂಚನ್,...

Close