ಮೂಲ್ಕಿ: ಬಿಜೆಪಿಕಾರ್ಯಕರ್ತರ ಸಭೆ

ಮೂಲ್ಕಿ:ರಾಜ್ಯ ಬಿಜೆಪಿ ಸರ್ಕಾರ ತನ್ನ ಅಬಿವೃದ್ದಿ ಕಾರ್ಯಗಳಿಂದ ದೇಶದಲ್ಲಿಯೇ 2ನೇ ಸ್ಥಾನ ಗಳಿಸಿದ್ದು ಮಾತ್ರವಲ್ಲದೆ ತೆರಿಗೆ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದು ಜನ ಸಾಮಾನ್ಯರಿಗೆ ಯಾವೂದೆ ರೀತಿಯ ಕರಭಾರವಿರಿಸದೆ 1ಲಕ್ಷ25ಸಾವಿಕಕೋಟಿಯ ಯಶಸ್ವಿ ಕೃಷಿ ಬಜೆಟ್ ನೀಡುವ ಮೂಲಕ ಜನಪರ ಕಾರ್ಯಗಳನ್ನು ನಡೆಸಿದೆ ಎಂದು ರಾಜ್ಯ ಸಭಾ ಸದಸ್ಯ ಡಾ.ಗಣೇಶ್ ಕಾರ್ನಿಕ್ ಹೇಳಿದರು.
ಮೂಲ್ಕಿ ಆಧಿಧನ್ ಸಭಾಂಗಣದಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ರೈತರಿಗೆ ಪೂರಕವಾಗಿರುವ ಕುಮ್ಕಿ ಹಕ್ಕಿನ ಬಗ್ಗೆ ಮತ್ತು ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಗೊಂಡ ಮನೆ ಸಕ್ರಮಗೊಳಿಸುವ ಮಸೂದೆಯನ್ನು ವಿರೋಧಿಸಿರುವ ಕಾಂಗ್ರೆಸ್ ಪಕ್ಷ ರೈತರು ಮತ್ತು ಬಡಜನರ ವಿರೋಧಿಯಾಗಿದೆ ಎಂದರು.
ಐದುಬಾರಿ ಕಾರ್ಕಳ ಕ್ಷೇತ್ರದ ಶಾಸಕರಾಗಿ ಮಂತ್ರಿಗಳಾಗಿ ರಾಜ್ಯ ಮತ್ತು ಕೇಂದ್ರದ ವಿವಿಧ ಹುದ್ದೆ ಗಳನ್ನು ನಿರ್ವಹಿಸಿರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ವೀರಪ್ಪ ಮೊಲಿಯವರು ಇದುವರೆಗೂ ತಮ್ಮ ಪ್ರದೇಶದ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನು ನೀಡದೆ ಇದೀಗ ಮಾಜಿ ಮುಖ್ಯ ಮಂತ್ರಿ ಎನ್ನಲು ನಾಚಿಕೆಯಾಗುತ್ತದೆ ಎಂದು ಕರ್ನಾಟಕದ ಜನತೆಗೆ ಅಪಮಾನ ಮಾಡಿದ್ದು ಜನತೆ ಅವರಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸಬೇಕು ಎಂದರು.
ಮೂಲ್ಕಿ ಮೂಡಬಿದ್ರಿಯಲ್ಲಿ ಮೂಲ್ಕಿಗೆ ಸುಮಾರು17ಕೋಟಿ ಮತ್ತು ಮೂಡಬಿದ್ರಿಗೆ62ಕೋಟಿ ಸರ್ಕಾರದ ಅನುದಾನ ಬಂದಿದ್ದು ಇಲ್ಲಿನ ಧಾರ್ಮಿಕ ಕ್ಷೇತ್ರಗಳು ಮತ್ತು ವಿದ್ಯಾಕ್ಷೇತ್ರಗಳು ಬಿಟ್ಟರೆ 15 ವರ್ಷಗಳ ಶಾಸಕತ್ವದ ಅವಧಿಯಲ್ಲಿ ಶಾಸಕರ ಕೊಡುಗೆ ಶೂನ್ಯವಾಗಿದೆ ಎಂದರು.
ರಾಜ್ಯ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಪಕ್ಷಗಳಿಂದ ಆಯ್ಕೆಯಾದ ಶಾಸಕರಿಗೆ ಸಮಾನವಾಗಿ ಅನುದಾನ ನೀಡಿ ರಾಜ್ಯದ ಅಭಿವೃದ್ಧಿಯಲ್ಲಿ ಸಹಕರಿಸಿದ್ದು ಮೂಲ್ಕಿ ಮತ್ತು ಮೂಡಬಿದ್ರಿಯ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭ ಮಾತನಾಡಿದ ಜಗದೀಶ ಅಧಿಕಾರಿ,ರಾಜ್ಯ ಸರ್ಕಾರದ ಯೋಜನೆಗಳನ್ನು ಮೂಲ್ಕಿ ಮೂಡಬಿದ್ರಿಯಲ್ಲಿ ಸಮಾನಾಂತರವಾಗಿ ಬಳಸದೆ ಕಾಂಗ್ರೆಸ್ ಶಾಸಕರು ತಾರತಮ್ಯ ಮಾಡಿದ್ದಾರೆ ಆದರೆ ಪ್ರದೇಶದ ಎಲ್ಲಾ ಕಡೆಯಲ್ಲೂ ತಮ್ಮ ಭಾವಚಿತ್ರದ ಪ್ಲೆಕ್ಸ್ ಹಾಕಿಸಿರುವುದು ಅವರ ಮಹಾನ್ ಸಾಧನೆ ಎಂದರು.
ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಾತನಾಡಿ, ಪ್ರದೇಶದ ಉನ್ನತಿ ಹಾಗೂ ಸಂಘಟಿತ ಬೆಳವಣಿಗೆಗಾಗಿ ಶ್ರಮ ಪಟ್ಟು ದಿವಂಗತರಾದ ಸುಖಾನಂದ ಶೆಟ್ಟಿಯವರ ತತ್ವ ಮತ್ತು ಆದರ್ಶ ಮುಂದಿನ ದಿನಗಳಲ್ಲಿ ಚಾಲ್ತಿಗೆ ತರಲು ಹಾಗೂ ಮೂಡಬಿದ್ರಿ ಮತ್ತು ಮೂಲ್ಕಿಯ ತಾರತಮ್ಯ ರಹಿತ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ದನಾಗಿದ್ದು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೇತ್ರದ ಅಧ್ಯಕ್ಷೆ ಕಸ್ತೂರಿ ಪಂಜ ವಹಿಸಿದ್ದರು.ಜಿಪಂ.ಸದಸ್ಯ ಈಶ್ವರ ಕಟೀಲು,ಕೆ.ಭುವನಾಭಿರಾಮ ಉಡುಪ,ಶೈಲೇಶ್ ಕುಮಾರ್,ದಿನೇಶ್ ಮಾನಂಪಾಡಿ,ದಿವಾಕರ ಸಾಮಾನಿ, ಭೋಜರಾಜ ಶೆಟ್ಟಿ ಸೂರಿಂಜೆ, ಸುನೀಲ್ ಆಳ್ವಾ ಮತ್ತಿತರರಿದ್ದರು.

Mulki-22041301

Comments

comments

Leave a Reply

Read previous post:
ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ – ಹಗಲು ರಥೋತ್ಸವ

ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ  ಶುಕ್ರವಾರ ಹಗಲು ರಥೋತ್ಸವ  ನಡೆಯಿತು ಸಾವಿರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡರು.

Close