ವಸಂತ ವೇದ ಶಿಬಿರ

Raghunath Kamath
ಕಿನ್ನಿಗೋಳಿ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಬೇಕು. ವಿದ್ಯಾರ್ಥಿ ಹಂತದಲ್ಲಿಯೇ ಸಂಸ್ಕೃತಿ ಸಂಸ್ಕಾರಗಳನ್ನು ಭೋದಿಸಿ ಬದುಕಿನ ಮೌಲ್ಯಗಳನ್ನು ತುಂಬಿಸಿ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು ಎಂದು ಕುಂಭಾಶಿ ಆನೆಗುಡ್ಡೆ ದೇವಳದ ಅನುವಂಶೀಯ ಮೊಕ್ತೇಸರ ಡಾ| ಸೂರ್ಯ ನಾರಾಯಣ ಉಪಾಧ್ಯಾಯ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಸಂಜೀವನಿ ಟ್ರಸ್ಟ್ ಮುಂಬೈ, ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನ ಜಂಟೀ ಆಶ್ರಯದಲ್ಲಿ ಸೋಮವಾರ ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ವಸಂತ ವೇದ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿ ನಾರಾಯಣ ಆಸ್ರಣ್ಣ, ಸಂಜೀವಿನಿ ಟ್ರಸ್ಟ್‌ನ ಡಾ| ಸುರೇಶ್ ರಾವ್, ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಕಾಲೇಜು ಪ್ರಾಂಶುಪಾಲ ಡಾ| ನಾಗರಾಜ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಪವನ್ ರಾಜ್ ವೇದ ಘೋಷದೊಂದಿಗೆ ಪ್ರಾರ್ಥಿಸಿದರು, ಡಾ| ಪದ್ಮನಾಭ ಮರಾಠೆ ಧನ್ಯವಾದವಿತ್ತರು. ಶ್ರೀ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Kinnigoli23041301

 

Comments

comments

Leave a Reply

Read previous post:
ಕೆರೆಕಾಡು- ಮನೆ ಮನೆಗೆ ತೆರಳಿ ಮತ ಯಾಚನೆ

ಕಿನ್ನಿಗೋಳಿ: ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮನಾಥ ಕೋಟ್ಯಾನ್ ಬೆಳ್ಳಾಯರು ಗ್ರಾಮದ ಕೆರೆಕಾಡು ಪರಿಸರದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಪಡುಪಣಂಬೂರು ಗ್ರಾ. ಪಂ. ಮಾಜಿ...

Close