ಮೆನ್ನಬೆಟ್ಟು -ಗೋಬರ್ ಗ್ಯಾಸ್ ಅನುದಾನ

ಕಿನ್ನಿಗೋಳಿ: ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಾವಯವ ಗ್ರಾಮ / ಸ್ಥಳ ಯೋಜನೆ ಮೆನ್ನಬೆಟ್ಟು ಇವರ ಜಂಟಿ ಆಶ್ರಯದಲ್ಲಿ ಸಾವಯವ ಕೃಷಿ ಸಂಕಿರಣ ಕಿನ್ನಿಗೋಳಿ ಮೆನ್ನಬೆಟ್ಟು ಗ್ರಾಮದಲ್ಲಿ ಗೋಬರ್ ಗ್ಯಾಸ್ ಮತ್ತು ಸಾವಯವ ಗೊಬ್ಬರ ತಯಾರಿ ವಿಧಾನದ ಬಗ್ಗೆ ತರಬೇತಿ ಕಾರ್ಯಗಾರ ಮಂಗಳವಾರ ಕಿನ್ನಿಗೋಳಿ ಕೆಮ್ಮಡೆಯ ಕಲ್ಯಾಣಿ ಎಂಬುವವರ ಮನೆಯಲ್ಲಿ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಜನಾರ್ಧನ. ಎಂ ಮಾಹಿತಿ ಹಾಗೂ ತರಬೇತಿ ನೀಡಿದರು. ಬೆನೆಡಿಕ್ಟ, ಯೋಗಿನಿ ಇವರಿಗೆ ಸಾಂಖೇತಿಕವಾಗಿ ಹಾಗೂ ಒಟ್ಟು 15 ಫಲಾನುಭಾವಿ ಕುಟುಂಬಗಳಿಗೆ ಗೋಬರ್ ಗ್ಯಾಸ್ ಅನುದಾನ ನೀಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯ ಮೇಲ್ವಿಚಾರಕಿ ಲತಾ ಕೆ.ಅಮೀನ್, ಕೃಷಿ ಸಹಾಯಕ ದಿವಾಕರ್, ಜಗದೀಶ್ ಶೆಟ್ಟಿ, ಪುರುಷೋತ್ತಮ ಕೋಟ್ಯಾನ್, ಮಧುಕರ ಕೊಡೆತ್ತೂರು, ಗೋಪಾಲ್, ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-24041301

Comments

comments

Leave a Reply

Read previous post:
ಶ್ರೀ ಮಾರಿಯಮ್ಮ ದೇವಸ್ಥಾನ ಮಾರಡ್ಕ ಬಿಂಬ ಪ್ರತಿಷ್ಠೆ.

ಕಿನ್ನಿಗೋಳಿ: ಶ್ರೀ ಮಾರಿಯಮ್ಮ ದೇವಸ್ಥಾನ ಮಾರಡ್ಕ ಇದರ ಮಾರಿಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವತ್ಥಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದೇವರ ಬಿಂಬ ಪ್ರತಿಷ್ಠೆ.

Close