ದೇವಾಡಿಗ ಸಂಘ ಪಡುಬಿದ್ರಿಗೆ ದೇವಾಡಿಗ ಕ್ರಿಕೆಟ್ ಪ್ರಶಸ್ತಿ

Bhagyavan Mulki

ಮೂಲ್ಕಿ: ಮೂಲ್ಕಿ ದೇವಾಡಿಗ ಸಮಾಜ ಸೇವಾ ಸಂಘ ದೇವಾಡಿಗ ಯುವ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿ ವಿಜಯಾ ಕಾಲೇಜು ಮೈದಾನದಲ್ಲಿ ನಡೆದ ದೇವಾಡಿಗ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ದೇವಾಡಿಗ ಸಂಘ ಪಡುಬಿದ್ರಿ ತಂಡವು ಪ್ರಥಮ ಸ್ಥಾನವನ್ನು, ಪಂಚದುರ್ಗಾ ಬಪ್ಪನಾಡು ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು. ಸುಮಾರು ೧೮ತಂಡಗಳು ಭಾಗವಹಿಸಿದರು.ಉದ್ಘಾಟನಾ ಸಮಾರಂಭದಲ್ಲಿ ದೇವಾಡಿಗ ಸಂಘದ ಅಧ್ಯಕ್ಷರಾದ ದೊಡ್ಡಣ್ಣ ಮೊಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಲ್ಕಿ ಎಂ.ಆರ್.ಪಿ.ಐ.ಟಿ.ಐ. ಪ್ರಾಚಾರ್ಯರಾದ ವೈ.ಎನ್.ಸಾಲಿಯಾನ್, ಉಡುಪಿ ಆಟೋ ರಿಕ್ಷಾ ಚಾಲಕರ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಕದ್ರಿ ಮೋಹನ್ ದೇವಾಡಿಗ ಮತ್ತು ಶ್ರೀಧರ್ ದೇವಾಡಿಗ ವಹಿಸಿದ್ದರು, ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಮುದ್ದು ದೇವಾಡಿಗ ವಹಿಸಿದ್ದರು. ಮಂಗಳೂರು ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ದಿನೇಶ್ ದೇವಾಡಿಗ ಬಹುಮಾನ ವಿತರಣೆ ಮಾಡಿದರು. ಕಾರ್ಯಧ್ಯಕ್ಷರಾದ ಆನಂದ ದೇವಾಡಿಗ, ಖಜಾಂಜಿ ಗಿರೀಶ್ ದೇವಾಡಿಗ, ಯುವ ಸಂಘಟನೆ ಅಧ್ಯಕ್ಷರಾದ ದಿನೇಶ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾದ ಬಾಲಕೃಷ್ಣ ದೇವಾಡಿಗ, ನವೀನ್‌ರಾಜ್, ರವಿಚಂದ್ರ ಎಸ್.ವಿ.ಟಿ., ಅರುಣ್ ಕುಮಾರ್, ವಿಶ್ವನಾಥ್ ಬಿ. ಇವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಿ. ಸಂಜೀವ ದೇವಾಡಿಗ ಸ್ವಾಗತಿಸಿದರು. ಪ್ರಸ್ತಾಪನೆಯನ್ನು ಗಣೇಶ್ ದೇವಾಡಿಗ ಮಾಡಿದರು, ಜಯಾನಂದ ದೇವಾಡಿಗ ವಂದಿಸಿದರು ಹಾಗೂ ಕಾರ್ಯಕ್ರಮ ನಿರ್ವಹಣೆಯನ್ನು ರಾಜೇಶ್ ಶೇರಿಗಾರ್ ಪಡುಬಿದ್ರಿ ನಿರ್ವಹಿಸಿದರು.

Kinnigoli-25041300

Comments

comments

Leave a Reply

Read previous post:
ಮೂಲ್ಕಿ- ಮೂಡಬಿದ್ರೆ ಕ್ಷೇತ್ರ ಬಿಜೆಪಿ ಪ್ರಚಾರ

ಏಳಿಂಜೆ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಪೂಜೆ  ಕವತ್ತಾರು ಅಬ್ಬಗ ದಾರಗ ಕ್ಷೇತ್ರದಲ್ಲಿ ಪೂಜೆ  ಕೊಳಚಿ ಕಂಬಳ ಬೊರ್ಬಯ ದೈವಸ್ಥಾನದಲ್ಲಿ ಪೂಜೆ ಕವತ್ತಾರು ಬಿಜೆಪಿ ಕಾರ್ಯಕರ್ತರ ಸಭೆ  ಕವತ್ತಾರು...

Close