ಮನ ಗೆಲ್ಲುವ ಶಿಮಂತೂರು ಬೇಸಿಗೆ ಶಿಬಿರ

P.V. Rao

ಕಿನ್ನಿಗೋಳಿ : ದಿನಾಂಕ 07-04-2013ರಂದು ಶ್ರಿ ಆದಿಜನಾರ್ದನ ದೇವಸ್ಥಾನದಲ್ಲಿ ಪ್ರಾರಂಭಗೊಂಡ 43 ದಿನಗಳ ಸಂಸ್ಕೃತಿ ಶಿಬಿರವು ಮಕ್ಕಳ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ಪ್ರತೀದಿನ ಯೋಗ ಗುರು ಶ್ರೀ ಜಯಶೆಟ್ಟಿಯವರಿಂದ ಯೋಗ/ಧ್ಯಾನ, ಪ್ರಸಿದ್ಧ ಭಜನಾ ಸಂಕೀರ್ತನಾಕಾರರಾದ ಶ್ರೀ ನರಸಿಂಹ ಭಾಗವತ್ ಮತ್ತು ಶ್ರೀ ತಿಮ್ಮಪ್ಪ ಹೆಗ್ಡೆಯವರಿಂದ ಭಜನಾ ತರಬೇತಿ, ಶ್ರೀ ಲಕ್ಶ್ಮೀಕಾಂತ್ ಇವರಿಂದ ನಿತ್ಯಸ್ತೋತ್ರಗಳು ಮತ್ತು ಶ್ರೀ ವಿಷ್ಣು ಸಹಸ್ರನಾಮ ಪಠಣೆ ತರಬೇತಿ, ಶ್ರೀ ಹರಿ ಹೆಚ್ ಇವರಿಂದ ಜೀವನ ಕೌಶಲ್ಯ ತರಬೇತಿ, ಶ್ರೀ ಜಯರಾಮ್ ಇವರಿಂದ ಹಾರ್ಮೋನಿಯಂ ತರಬೇತಿ, ಶ್ರೀ ಶಿವಪ್ರಸಾದ್ ರಾವ್ ಇವರಿಂದ ಚಂಡೆವಾದನ ತರಬೇತಿ, ಶ್ರೀ ಸುರೇಶ್ ಕೊಲಕಾಡಿ ಇವರಿಂದ ಯಕ್ಷಗಾನ ತರಬೇತಿ, ಶ್ರೀ ಶ್ರೀಧರ್ ಶ್ರೀ ಆರ್ಟ್ಸ್ ಪಲಿಮಾರು ಇವರಿಂದ ಚಿತ್ರಕಲೆ ಮತ್ತು ಮುಖವಾಡ ತರಬೇತಿ ಶ್ರೀ ಪಿ.ಎಸ್. ಶೆಟ್ಟಿಗಾರ್ ಇವರಿಂದ ಇಂಗ್ಲಿಷ್ ಭಾಷಾ ತರಬೇತಿ ಮತ್ತು ಶ್ರೀ ಸುಧಾಕರ್ ಶೆಣೈ ಇವರಿಂದ ಭಾಷಣ ಮತ್ತು ಕಾರ್ಯಕ್ರಮ ನಿರ್ವಹಣೆ ತರಬೇತಿಯನ್ನು ನೀಡುತ್ತಿದ್ದು ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಬೇಸಗೆಯ ರಜಾಅವಧಿಯನ್ನು ಈ ರೀತಿಯ ನೈತಿಕ ಶಿಕ್ಷಣದ ಪರಿಣಾಮಕಾರಿಯಾಗಿ ತರಬೇತಿಯನ್ನು ಪಡೆದು ಕ್ರಿಯಾಶೀಲತೆಯಿಂದ ಅನುಭವಿಸುತ್ತಿದ್ದಾರೆ . ಶಿಬಿರದಲ್ಲಿ ಪ್ರಾತ್ಯಕ್ಷಿಕೆಗಳ ಮುಖಾಂತರ ಪ್ರತೀಯೊಬ್ಬರ ಪ್ರತಿಭೆಯನ್ನು ಗಮನಿಸಿ ಸೂಕ್ತ ಮಾರ್ಗದರ್ಶನ ಮಾಡುತ್ತಾ ಮುಕ್ತವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಸ್ತುತ ವಾತಾವರಣದಲ್ಲಿ ಇಂತಹ ನೈತಿಕ ಹಾಗೂ ಸಂಸ್ಕಾರಯುತ ಶಿಕ್ಷಣ ಅತೀ ಅಗತ್ಯವೆಂದು ಮನಗೊಂಡು ಶಿಮಂತೂರು ಶ್ರಿ ಆದಿಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದು ಊರ ಪರಊರ ಮಹನೀಯರು ಕೂಡ ಸಹಕಾರವನ್ನು ನೀಡುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ ಎಂದು ಶಿಬಿರದ ಸಂಚಾಲಕರಾದ ಶ್ರೀ ವಿಶ್ವನಾಥ್ ರಾವ್ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಶೆಟ್ಟಿಯವರು ತಿಳಿಸಿರುತ್ತಾರೆ.

Kinnigoli-27041302

Comments

comments

Leave a Reply

Read previous post:
ಧ.ಗ್ರಾ.ಯೋ. ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ವಿತರಣೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಯೋಜನೆಯಡಿಯಲ್ಲಿ ಮೆನ್ನಬೆಟ್ಟು ಕಾರ್ಯಕ್ಷೇತ್ರ ವ್ಯಾಪ್ತಿಯ ಶ್ರೀ ದೇವಿ ತಂಡದ ಪುಷ್ಪಾ ಶೆಟ್ಟಿ ಅವರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ40000/-...

Close