ಕಟೀಲು ಸಾಮೂಹಿಕ ವಿವಾಹ : 22 ಜೋಡಿ ಹಸೆಮಣೆಗೆ

ಕಿನ್ನಿಗೋಳಿ : ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇವರ ಜಂಟೀ ಆಶ್ರಯದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಸೋಮವಾರ ಸಂಜೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆಯಿತು.  ಅವಿಭಜಿತ ದ.ಕನ್ನಡ-ಉಡುಪಿ ಜಿಲ್ಲೆ ಹಾಗೂ ಇತರ ಜಿಲ್ಲೆಗಳನ್ನು ಒಳಗೊಂಡ 22 ಜೋಡಿಗಳು ಮದುವೆ ಹೊಸ್ತಿಲು ದಾಟಿದರು.

ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಳ ಆಡಳಿತ ಮೊಕ್ತೇಸರ ಎ.ಜೆ.ಶೆಟ್ಟಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದರು. ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉಪಾಧ್ಯಕ್ಷ ಎ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸ ಸಂಶೋಧಕ ಕೆ.ಎಲ್. ಕುಂಡಂತಾಯ ಧಾರ್ಮಿಕ ಉಪನ್ಯಾಸ ನೀಡಿದರು.

ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ ಧರ್ಮದರ್ಶಿ ಸುವರ್ಣ ಬಾಭಾ, ವಿಜಯಲಕ್ಷ್ಮೀ ಕೇಶವ ಅಂಚನ್ ಮುಂಬಯಿ, ಜಯಂತಿ ಆಸ್ರಣ್ಣ, ಕಸಾಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಯುಗಪುರುಷದ ಭುವನಾಭಿರಾಮ ಉಡುಪ, ಸತೀಶ್ ಎನ್. ಬಂಗೇರ, ಶ್ರೀಕಾಂತ ಉಡುಪ, , ವಾಸುದೇವ ರಾವ್ ಪುನರೂರು, ಮುಂಬಯಿ ಉದ್ಯಮಿ ಭುಜಂಗ ಶೆಟ್ಟಿ, ಹರೀಶ್ ಕುಮಾರ್, ಗೋಪಾಲಕೃಷ್ಣ ಆಸ್ರಣ್ಣ, ರಮೇಶ್ ವಾಸುದೇವ, ರಾಮದಾಸ್, ಮೋಹನ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿ ಪ್ರಸ್ತಾವನೆಗೈದರು. ಪಿ. ಸತೀಶ್ ರಾವ್ ವಂದಿಸಿದರು. ರಮ್ಯಾ ಆಸ್ರಣ್ಣ ಕಾರ್ಯಕ್ರಮ ನಿರೂಪಿಸಿದರು

Kinnigoli-30041303

Kinnigoli-30041304

Kinnigoli-30041305

Kinnigoli-30041306

Kinnigoli-30041307

Kinnigoli-30041308

Kinnigoli-30041309

Kinnigoli-30041310

Kinnigoli-30041311

Kinnigoli-30041312

Kinnigoli-30041313

Kinnigoli-30041314

Comments

comments

Leave a Reply

Read previous post:
ಎಳತ್ತೂರು ನೆಲಗುಡ್ಡೆ ಕೋರ‍್ದಬ್ಬು ದೈವಸ್ಥಾನ ಅನುದಾನ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯ, ಕಿನ್ನಿಗೋಳಿ ಕಾರ್ಯಕ್ಷೇತ್ರದ ಎಳತ್ತೂರು ನೆಲಗುಡ್ಡೆ ಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಧರ್ಮಸ್ಥಳ ಸ್ಥಳ ಸಮುದಾಯ...

Close