ಕಿನ್ನಿಗೋಳಿಯಲ್ಲಿ ಬಿಜೆಪಿ ಸಾರ್ವಜನಿಕ ಸಭೆ

ಕಿನ್ನಿಗೋಳಿ: ಬಿಜೆಪಿ ದೂರದರ್ಶಿತ್ವವುಳ್ಳ ಸಂಘಟಿತ ಪಕ್ಷ. ಕಳೆದ ಐದು ವರ್ಷಗಳಿಂದ ಬಿಜೆಪಿ ಸರಕಾರ ಗ್ರಾಮೀಣ ಭಾಗಗಳಿಗೆ ಜನಪರ ಕಾಳಜಿಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಎಲ್ಲಾ ಸಮುದಾಯದ ಜನರಿಗೆ ಸವಲತ್ತುಗಳು, ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿದೆ. ಬಿಜೆಪಿಯ ಸಾಧನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮನ ಮುಟ್ಟುವಂತೆ ತಿಳಿ ಹೇಳಬೇಕು ಎಂದು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹೇಳಿದರು.
ಬುಧವಾರ ಕಿನ್ನಿಗೋಳಿ ಪೇಟೆಯಲ್ಲಿ ನಡೆದ ಸಾರ್ವಜನಿಕ ಬಿಜೆಪಿ ಸಭೆಯಲ್ಲಿ ಮಾತನಾಡಿದರು.
ಮೂಲ್ಕಿ- ಮೂಡಬಿದ್ರೆ ಕ್ಷೇತ್ರಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭುವನಾಭಿರಾಮ ಉಡುಪ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಪ್ರತೀಕ್ ಶೆಟ್ಟಿ, ಸುಚರಿತ ಶೆಟ್ಟಿ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಆಶಾ ರತ್ನಾಕರ ಸುವರ್ಣ, ತಾ. ಪಂ.ಮಾಜಿ ಅಧ್ಯಕ್ಷೆ ಭವ್ಯಾ ಗಂಗಾಧರ್, ಬೇಬಿ ಸುಂದರ ಕೋಟ್ಯಾನ್, ಸಾವಿತ್ರಿ, ದೇವ ಪ್ರಸಾದ್ ಪುನರೂರು, ಭಾಸ್ಕರ ದಾಸ್ ಎಕ್ಕಾರು ಉಪಸ್ಥಿತರಿದ್ದರು.
ಜನಾರ್ಧನ ಕಿಲೆಂಜೂರು ಸ್ವಾಗತಿಸಿ, ದೇವಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-03051302

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಬಿಜೆಪಿ ರೋಡ್ ಶೋ

ಕಿನ್ನಿಗೋಳಿ: ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಬುಧವಾರ ಕಿನ್ನಿಗೋಳಿ ಪೇಟೆಯಲ್ಲಿ ಬಿಜೆಪಿ ಪಕ್ಷದ ರೋಡ್ ಶೋ ನಡೆಯಿತು ಹಾಗೂ ಪೇಟೆ ಪರಿಸರದಲ್ಲಿ ಮತ...

Close