ಮಠ ಮಂದಿರ – ಧಾರ್ಮಿಕ ನೆಲೆ

ಕಿನ್ನಿಗೋಳಿ: ಧರ್ಮದ ಚೌಕಟ್ಟುವಿರುವ ಮಠ ಮಂದಿರಗಳಿಂದಾಗಿ ಧಾರ್ಮಿಕತೆ ಹಾಗೂ ಸಂಸ್ಕೃತಿಗಳು ಉಳಿದುಕೊಂಡಿದೆ. ಅದನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು.
ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂಡಳಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಕಾರ ಭಾರತೀಯ ವಿಭಾಗ ಸಂಚಾಲಕ ಆದರ್ಶ ಗೋಖಲೆ ದಿಕ್ಸೂಚಿ ಭಾಷಣ ನೀಡಿದರು. ಈ ಸಂಧರ್ಭ ಸಾಧಕ ಯೋಗೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಶ್ರೀಕಾಂತ್ ಶೆಟ್ಟಿ, ಉದ್ಯಮಿ ಜಯ ಎಂ. ಶೆಟ್ಟಿ, ಯದುನಾರಾಯಣ ಶೆಟ್ಟಿ ಮುಂಬಯಿ, ಮಂಡಳಿ ಅಧ್ಯಕ್ಷ ತಾರಾನಾಥ ದೇವಾಡಿಗ, ಮಹಿಳಾ ಮಂಡಳಿ ಅಧ್ಯಕ್ಷೆ ಕಮಲಾಕ್ಷಿ ದೇವಾಡಿಗ, ವಾಸುದೇವ ರಾವ್ ಪುನರೂರು, ಶ್ರೀಧರ ಶೆಟ್ಟಿ, ಉಮೇಶ ಆಚಾರ್ಯ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಜಿ.ಕೆ. ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.

Kinnigoli-04051301

Comments

comments

Leave a Reply

Read previous post:
ಎಳತ್ತೂರು ನೆಲಗುಡ್ಡೆ ಕೋರ‍್ದಬ್ಬು ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ನೆಲಗುಡ್ಡೆ ಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಸ್ಥಾನದಲ್ಲಿ ವೇದಮೂರ್ತಿ ಕಿಲ್ಪಾಡಿ ಶ್ರೀ ನಾರಾಯಣ ಭಟ್ಟರ ನೇತೃತ್ವದಲ್ಲಿ ಶ್ರೀ ಕೋರ‍್ದಬ್ಬು ಮತ್ತು ಪರಿವಾರ...

Close