ಮತದಾನ ಜಾಗೃತಿ – ಎಂ.ಆರ್.ಪೂಂಜ ಐ.ಟಿ.ಐ ತೋಕೂರು

ಕಿನ್ನಿಗೋಳಿ: ಭ್ರಷ್ಟಾಚಾರ ಮುಕ್ತ ದೇಶವಾಗಬೇಕಾದರೆ ಯುವಜನರು ಮತ್ತು ವಿದ್ಯಾವಂತರು ಕಡ್ಡಾಯವಾಗಿ ಮತದಾನ ಮಾಡಿ ಪ್ರಾಮಾಣಿಕ ಹಾಗೂ ದಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮಣಿಪಾಲ ದಯಾನಂದ ಲಾಗ್ವಾಣ್‌ಕರ್ ಹೇಳಿದರು.
ತೋಕೂರು, ಮುಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ.ನಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ನಡೆದ ಮತದಾನ ಮತ್ತು ಮಾತದಾನದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್.ಎಸ್.ಎಸ್. ಅಧಿಕಾರಿ ರಘುರಾಮ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ರಾಘವೇಂದ್ರ ಅಡಿಗ ಮತದಾನದ ಪ್ರಕ್ರಿಯೆಯ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮತದಾನ ಮಾಡುವ ಪ್ರತಿಜ್ಞೆ ಕೈಗೊಂಡರು.

Kinnigoli-04051303

Comments

comments

Leave a Reply

Read previous post:
ಪ್ರತಿಷ್ಠಾ ವರ್ಧಂತಿ – ಶ್ರೀ ಮಹಾಲಿಂಗೇಶ್ವರ ದೇವಳ ಎಳತ್ತೂರು

ಕಿನ್ನಿಗೋಳಿ: ತಾಳಿಪಾಡಿ-ಎಳತ್ತೂರು ವಿಪ್ರ ಸಂಪದ ಪ್ರತಿಷ್ಠಾನದ ಆಶ್ರಯದಲ್ಲಿ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ವೇದಮೂರ್ತಿ ಪಾದೂರು ನರಹರಿ ತಂತ್ರಿಗಳ ಮಾರ್ಗದರ್ಶನ, ಶ್ರೀ ಕ್ಷೇತ್ರದ ಪ್ರಧಾನ...

Close