ಪ್ರತಿಷ್ಠಾ ವರ್ಧಂತಿ – ಶ್ರೀ ಮಹಾಲಿಂಗೇಶ್ವರ ದೇವಳ ಎಳತ್ತೂರು

ಕಿನ್ನಿಗೋಳಿ: ತಾಳಿಪಾಡಿ-ಎಳತ್ತೂರು ವಿಪ್ರ ಸಂಪದ ಪ್ರತಿಷ್ಠಾನದ ಆಶ್ರಯದಲ್ಲಿ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ವೇದಮೂರ್ತಿ ಪಾದೂರು ನರಹರಿ ತಂತ್ರಿಗಳ ಮಾರ್ಗದರ್ಶನ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಅನಂತಮೂರ್ತಿ ಭಟ್ಟರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಉಪಮಹಾ ಪ್ರಬಂಧಕ ರಮೇಶ್ ರಾವ್ ಅಧ್ಯಕ್ಷತೆ ವಹಿಸಿ “ದೇವಾಲಯಗಳು ಜನರಲ್ಲಿ ಧಾರ್ಮಿಕ ಪ್ರಜ್ಞೆ, ಶೃದ್ಧೆ, ಸಂಸ್ಕಾರ ಹಾಗೂ ಶಿಕ್ಷಣದ ಬಗ್ಗೆ ತಿಳುವಳಿಕೆ ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ಹೇಳಿದರು.
ವಿಜಯೇಂದ್ರ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿಹರಿಕೃಷ್ಣ ಪುನರೂರು, ಯುಗಪುರುಷದ ಭುವನಾಭಿರಾಮ ಉಡುಪ, ನರಸಿಂಹ ಭಟ್, ಸದಾಶಿವ ಭಟ್ ಉಪಸ್ಥಿತರಿದ್ದರು.
ವಿಪ್ರ ಸಂಪದ ಅಧ್ಯಕ್ಷ ರಾಜಕುಮಾರ್ ಭಟ್ ಸ್ವಾಗತಿಸಿದರು. ರಾಧಕೃಷ್ಣ ಭಟ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

Kinnigoli-04051302

Comments

comments

Leave a Reply

Read previous post:
ಮಠ ಮಂದಿರ – ಧಾರ್ಮಿಕ ನೆಲೆ

ಕಿನ್ನಿಗೋಳಿ: ಧರ್ಮದ ಚೌಕಟ್ಟುವಿರುವ ಮಠ ಮಂದಿರಗಳಿಂದಾಗಿ ಧಾರ್ಮಿಕತೆ ಹಾಗೂ ಸಂಸ್ಕೃತಿಗಳು ಉಳಿದುಕೊಂಡಿದೆ. ಅದನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ...

Close