ಎಳತ್ತೂರು ನೆಲಗುಡ್ಡೆ – ಧಾರ್ಮಿಕ ಸಭೆ

ಕಿನ್ನಿಗೋಳಿ: ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ, ನಂಬಿಕೆ ಬಹು ಮುಖ್ಯ ಧಾರ್ಮಿಕ ಕೇಂದ್ರಗಳಲ್ಲಿ ಸಮಾಜ ಮುಖಿ ಹಿತಚಿಂತನೆಯ ಕಾರ್ಯಗಳು ಸತತವಾಗಿ ನಡೆಯಬೇಕು. ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಹಾಗೂ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಹೆಗ್ಡೆ ಹೇಳಿದರು.
ಎಳತ್ತೂರು ನೆಲಗುಡ್ಡೆ ಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಸ್ಥಾನದಲ್ಲಿ ಗುರುವಾರ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಮೂರ್ತಿ ವಾದಿರಾಜ ಉಪಾದ್ಯಾಯ ಕೊಲೆಕಾಡಿ ಆಶೀರ್ವಚನಗೈದು ಧಾರ್ಮಿಕ ಉಪನ್ಯಾಸವಿತ್ತರು.
ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಆದಿ ಜನಾರ್ಧನ ದೇವಳ ಶಿಮಂತೂರು ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ ಕೆರೆಗುತ್ತು, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಸುಕುಮಾರ್ ಶೆಟ್ಟಿ, ಮೋಹನ್ ಕೋಟ್ಯಾನ್, ಸದಾಶಿವ ದೇವಾಡಿಗ, ರವಿ ಪಲಿಮಾರ್, ದೈವಸ್ಥಾನ ಸಮಿತಿ ಗೌರಾವಾಧ್ಯಕ್ಷ ರವಿರಾಜ ಶೆಟ್ಟಿ, ಅಧ್ಯಕ್ಷ ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.
ಕಿಲ್ಪಾಡಿ ವೇದಮೂರ್ತಿ ನಾರಾಯಣ ಭಟ್ ಹಾಗೂ ಕಾಷ್ಠ ಶಿಲ್ಪಿ ಅಚ್ಯುತ ಆಚಾರ್ಯ ಸಾಧಕರ ನೆಲೆಯಲ್ಲಿ ಹಾಗೂ ದೈವಸ್ಥಾನ ಅರ್ಚಕ ನಾಥು ಮುಖಾರಿ, ಗೋಪಾಲ, ನರ್ಸು ಮುಖಾರಿ, ಅವರನ್ನು ದೈವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ದೈವಸ್ಥಾನ ಸಮಿತಿ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಎಳತ್ತೂರು ಸ್ವಾಗತಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-04051304

Comments

comments

Leave a Reply

Read previous post:
ಮತದಾನ ಜಾಗೃತಿ – ಎಂ.ಆರ್.ಪೂಂಜ ಐ.ಟಿ.ಐ ತೋಕೂರು

ಕಿನ್ನಿಗೋಳಿ: ಭ್ರಷ್ಟಾಚಾರ ಮುಕ್ತ ದೇಶವಾಗಬೇಕಾದರೆ ಯುವಜನರು ಮತ್ತು ವಿದ್ಯಾವಂತರು ಕಡ್ಡಾಯವಾಗಿ ಮತದಾನ ಮಾಡಿ ಪ್ರಾಮಾಣಿಕ ಹಾಗೂ ದಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮಣಿಪಾಲ ದಯಾನಂದ ಲಾಗ್ವಾಣ್‌ಕರ್ ಹೇಳಿದರು....

Close