ಪಂಜ- ಕೊಯಿಕುಡೆ ಶ್ರೀ ಶನೈಶ್ಚರ ಮಂದಿರ ಉದ್ಘಾಟನೆ

Raghunath Kamath
ಕಿನ್ನಿಗೋಳಿ: “ಸಮಾಜದಲ್ಲಿ ಧರ್ಮದ ಬಗ್ಗೆ ಜಾಗೃತಿಯಾದಾಗ ಅಧರ್ಮ ದೂರವಾಗುತ್ತಿದೆ. ಜನರಲ್ಲಿ ಧರ್ಮ ಸಂಸ್ಕಾರ ಶಿಸ್ತು ಸಂಯಮವಿದ್ದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಎಂದು ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.
ಶನಿವಾರ ಪಂಜ ಕೊಯಿಕುಡೆ ಶ್ರೀ ಶನೈಶ್ಚರ ಮಂಡಳಿ ಆಶ್ರಯದಲ್ಲಿ ನಡೆದ ಶ್ರೀ ಶನೈಶ್ಚರ ಮಂದಿರ ಉದ್ಘಾಟನಾ ಹಾಗೂ ಮಂದಿರಕ್ಕೆ ಮಂಟಪ ಸಮರ್ಪಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಈ ಸಂದರ್ಭ ಪ್ರಭಾಕರ ಆಳ್ವ, ಮಂಡಳಿಯ ನಿವೃತ್ತ ಅರ್ಚಕ ಶಂಕರ್ ಅಮೀನ್ ಉಲ್ಯ ಅವರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು.
ಮುಂಬಯಿ ಉದ್ಯಮಿ ಬಾಬು ಎನ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಪಂಜದ ಗುತ್ತು ವಿಶ್ವನಾಥ ಶೆಟ್ಟಿ, ನಲ್ಯಗುತ್ತು ಗುತ್ತಿನಾರ್ ಭೋಜ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ವಾಸುದೇವ ಭಟ್ ಪಂಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-07051303

Comments

comments

Leave a Reply

Read previous post:
ಜುಮ್ಮಾ ಮಸೀದಿ ನೂತನ ಅಧ್ಯಕ್ಷ -ಮೈದಾಕ ತಾಳಿಪಾಡಿ

Raghunath Kamath ಕಿನ್ನಿಗೋಳಿ: ಪುನರೂರು- ತಾಳಿಪಾಡಿ ಮುಹಮ್ಮದ್ ಜುಮ್ಮಾ ಮಸೀದಿ ಇದರ ವಾರ್ಷಿಕ ಮಹಾಸಭೆ ಇತ್ತೀಚಿಗೆ ನಡೆಯಿತು. ಮೈದಾಕ ತಾಳಿಪಾಡಿ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಪದಾಧಿಕಾರಿಗಳು...

Close