ಕಿನ್ನಿಗೋಳಿ ಶ್ರೀ ರಾಘವೇಂದ್ರ ಮಠ : ನೂತನ ರಥ ಸಮರ್ಪಣೆ

ಕಿನ್ನಿಗೋಳಿ: ಭಗವಂತನನ್ನು ಭಕ್ತಿಪೂರ್ವಕವಾಗಿ ಆರಾಧಿಸಿದಾಗ ಮನಸ್ಸಿನ ಕಲ್ಮಶಗಳು ದೂರವಾಗಿ, ಮನಸ್ಸು ಪರಿಶುದ್ಧಗೊಳ್ಳುವುದು ಮುಂದೆ ಉತ್ತಮ ಮನುಷ್ಯನಾಗಿ ರೂಪುಗೊಳ್ಳುವನು ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಯುಗಪುರುಷದ ರಾಘವೇಂದ್ರ ಸ್ವಾಮೀ ಮಠದ ದೇವರಿಗೆ ನೂತನ ರಥ ಸಮರ್ಪಣೆಯ ಸಂದರ್ಭ ಮಾತನಾಡಿದರು.
ಶ್ರೀ ರಾಘವೇಂದ್ರ ಮಂದಿರಕ್ಕೆ ಕೆಮ್ರಾಲ್ ಕೆ. ಕೃಷ್ಣ ಭಟ್ ಸೇವಾ ರೂಪದಲ್ಲಿ ರಥವನ್ನು ನಿರ್ಮಿಸಿ ಸಮರ್ಪಿಸಿದರು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಬರೂರು ಹಯಗ್ರೀವ ತಂತ್ರಿ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಮೊಕ್ತೇಸರ ಬಾಲಚಂದ್ರ ಭಟ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಪಿ.ಸತೀಶ್ ರಾವ್, ಇ. ಶ್ರೀನಿವಾಸ ಭಟ್, ವೈ.ಯೋಗೀಶ್ ರಾವ್, ವಿಶ್ವೇಶ್ವರ ಭಟ್, ಅಜಾರು ನಾಗರಾಜರಾಯ, ಗುರುಪ್ರಸಾದ್ ಭಟ್, ಮತ್ತಿತರರು ಉಪಸ್ಥಿತರಿದ್ದರು.

Mulki-09051304 Mulki-09051305 Mulki-09051306 Mulki-09051307

Comments

comments

Leave a Reply

Read previous post:
ಪಾಶ್ಚಾತ್ಯ ವ್ಯಾಮೋಹ ಸಲ್ಲದು : ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ

ಕಿನ್ನಿಗೋಳಿ: ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದಾಗಿ ನಮ್ಮ ಸನಾತನ ಭಾರತೀಯ ಸಂಸ್ಕೃತಿಯನ್ನು ದೂರಮಾಡಿಕೊಳ್ಳುತ್ತಿದ್ದೇವೆ. ಸಂಸ್ಕೃತಿ ಹಾಗೂ ಸಂಪ್ರದಾಯ ಉಳಿಸಲು ನಾವು ಕಾರ್ಯೋಮ್ಮುಖರಾಗಬೇಕು ಎಂದು ಕೇಮಾರು ಸಾಂದೀಪನಿ ಸಾಧಾನಾಶ್ರಮದ ಶ್ರೀ ಈಶ...

Close