ಪಾಶ್ಚಾತ್ಯ ವ್ಯಾಮೋಹ ಸಲ್ಲದು : ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ

ಕಿನ್ನಿಗೋಳಿ: ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದಾಗಿ ನಮ್ಮ ಸನಾತನ ಭಾರತೀಯ ಸಂಸ್ಕೃತಿಯನ್ನು ದೂರಮಾಡಿಕೊಳ್ಳುತ್ತಿದ್ದೇವೆ. ಸಂಸ್ಕೃತಿ ಹಾಗೂ ಸಂಪ್ರದಾಯ ಉಳಿಸಲು ನಾವು ಕಾರ್ಯೋಮ್ಮುಖರಾಗಬೇಕು ಎಂದು ಕೇಮಾರು ಸಾಂದೀಪನಿ ಸಾಧಾನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ಐಕಳ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ಮಹಾಂಕಾಳಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕುಂಭಾಬಿಷೇಕ ಪ್ರಯುಕ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಸಂತೋಷ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ಉಪನ್ಯಾಸಕ ಡಾ| ಗಣೇಶ್ ಅಮೀನ್ ಸಂಕಮಾರ್ ಧಾರ್ಮಿಕ ಉಪನ್ಯಾಸವಿತ್ತರು.
ಜಿಲ್ಲಾ ಮುಗೇರ ಸಂಘ ಮತ್ತು ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣಪ್ಪ ದೇರೆಬೈಲ್, ಮುಂಬಯಿ ಉದ್ಯಮಿ ಗಣೇಶ್ ಶೆಟ್ಟಿ ಐಕಳ, ಏಳಿಂಜೆ ಗಣೇಶ್ ಭಟ್, ವೈ ಯೋಗೀಶ್ ಭಟ್, ಗಿಡಿಗೆರೆ ಮಹಾಂಕಾಳಿ ದೈವಸ್ಥಾನದ ಶ್ಯಾಮ ಡಿ.ಕೆ., ಪುಷ್ಪಾ, ಮಹಾಬಲ ಶೆಟ್ಟಿ, ಸೊರ್ಕಳಗುತ್ತು ಶಂಕರ ಶೆಟ್ಟಿ , ರಾಮಣ್ಣ ಶೆಟ್ಟಿ ಕುಂರ್ಬಿಲ್ ಗುತ್ತು, ಉದ್ಯಮಿ ಕುಪ್ಪು ಸ್ವಾಮಿ, ರಾಕಿಯಪ್ಪನ್, ಸಮಿತಿ ಅಧ್ಯಕ್ಷ ಶೇಖರ ಕೆ ಐಕಳ ಉಪಸ್ಥಿತರಿದ್ದರು.
ದೈವಸ್ಥಾನದ ಅಧ್ಯಕ್ಷ ಕಿಟ್ಟಮುಗೇರ ಸ್ವಾಗತಿಸಿದರು, ರುಕ್ಮಯ ಕಾರ್ಯಕ್ರಮ ನಿರೂಪಿಸಿದರು.

Mulki-09051303

Comments

comments

Leave a Reply

Read previous post:
ಅಭಯಚಂದ್ರ ಗೆಲುವು; ಮೂಲ್ಕಿಯಲ್ಲಿ ಸಂಭ್ರಮ

Bhagyavan Sanil ಮೂಲ್ಕಿ; ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ನಿರಂತರ ನಾಲ್ಕನೇ ಬಾರಿ ಜಯಭೇರಿ ಬಾರಿಸಿದ ಕಾಂಗ್ರೇಸ್‌ನ ಅಭಯಚಂದ್ರ ಜೈನ್‌ರವರ ಗೆಲುವಿನ ಸಂಭ್ರಮವನ್ನು ಬುಧವಾರ ಮೂಲ್ಕಿ ಆಸುಪಾಸಿನಲ್ಲಿ...

Close