ಅಭಯಚಂದ್ರ ಗೆಲುವು; ಮೂಲ್ಕಿಯಲ್ಲಿ ಸಂಭ್ರಮ

Bhagyavan Sanil
ಮೂಲ್ಕಿ; ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ನಿರಂತರ ನಾಲ್ಕನೇ ಬಾರಿ ಜಯಭೇರಿ ಬಾರಿಸಿದ ಕಾಂಗ್ರೇಸ್‌ನ ಅಭಯಚಂದ್ರ ಜೈನ್‌ರವರ ಗೆಲುವಿನ ಸಂಭ್ರಮವನ್ನು ಬುಧವಾರ ಮೂಲ್ಕಿ ಆಸುಪಾಸಿನಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಪರಸ್ಪರ ಸಂಭ್ರಮವನ್ನು ಆಚರಿಸಿಕೊಂಡರು.
ಮೂಲ್ಕಿಯ ಬಸ್‌ನಿಲ್ದಾಣದಲ್ಲಿ ಪಟಾಕಿಯನ್ನು ಸಿಡಿಸಿದ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕವರಿಗೆ ಸಿಹಿಯನ್ನು ಹಂಚಿ ಅಭಯಚಂದ್ರರ ಜಯ ಘೋಷ ಕೂಗಿದರು.
ಕಿನ್ನಿಗೋಳಿ, ಪಕ್ಷಿಕೆರೆ, ಹಳೆಯಂಗಡಿ, ಕಾರ್ನಾಡು, ಕೆ.ಎಸ್.ರಾವ್.ನಗರ, ಲಿಂಗಪ್ಪಯ್ಯಕಾಡು, ಕೊಲ್ಲೂರು ಗ್ರಾಮೀಣ ಪ್ರದೇಶದಲ್ಲಿಯೂ ಪಟಾಕಿಯನ್ನು ಸಿಡಿಸಲಾಯಿತು.
ಕಾಂಗ್ರೇಸ್ಸಿನ ಮುಖಂಡರಾದ ವಸಂತ ಬೆರ್ನಾರ್ಡ್, ಯೋಗೀಶ್ ಕೋಟ್ಯಾನ್, ಶಶಿಕಾಂತ ಶೆಟ್ಟಿ, ಧನಂಜಯ ಕೋಟ್ಯಾನ್, ಪಯ್ಯೋಟ್ಟು ಸದಾಶಿವ ಸಾಲ್ಯಾನ್, ರೋಶನ್‌ಕುಮಾರ್, ಮೋಹನ್ ಕೋಟ್ಯಾನ್, ಜೊಸ್ಸಿ ಪಿಂಟೋ, ಶಾಲೆಟ್, ರಿಚರ್ಡ್, ಮಯ್ಯದ್ದಿ ಇತರ ಪ್ರಮುಖರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.

Mulki-09051301

Mulki-09051302

Comments

comments

Leave a Reply

Read previous post:
ಪಂಜ- ಕೊಯಿಕುಡೆ ಶ್ರೀ ಶನೈಶ್ಚರ ಮಂದಿರ ಉದ್ಘಾಟನೆ

Raghunath Kamath ಕಿನ್ನಿಗೋಳಿ: "ಸಮಾಜದಲ್ಲಿ ಧರ್ಮದ ಬಗ್ಗೆ ಜಾಗೃತಿಯಾದಾಗ ಅಧರ್ಮ ದೂರವಾಗುತ್ತಿದೆ. ಜನರಲ್ಲಿ ಧರ್ಮ ಸಂಸ್ಕಾರ ಶಿಸ್ತು ಸಂಯಮವಿದ್ದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಎಂದು ಕೃಷ್ಣಾಪುರ ಮಠದ...

Close