ಭಾರತ್ ಬ್ಯಾಂಕ್ ರಾಷ್ಟ್ರದಲ್ಲಿ 5ನೇ ಸ್ಥಾನ

Narendra Kerekad
ಕಿನ್ನಿಗೋಳಿ: ರಾಷ್ಟ್ರಮಟ್ಟದಲ್ಲಿ1,800 ಕೋ ಆಪರೇಟಿವ್ ಬ್ಯಾಂಕ್‌ನ ಸ್ಥಾನಮಾನದಲ್ಲಿ ಭಾರತ್ ಬ್ಯಾಂಕ್ 5ನೇ ಸ್ಥಾನದಲ್ಲಿದ್ದು ಇದು ಜನರ ಪ್ರೋತ್ಸಾಹದಲ್ಲಿ ಬೆಳೆದಂತಹ ಬ್ಯಾಂಕ್ ಎನ್ನುವ ಕೀರ್ತಿಯನ್ನು ಭವಿಷ್ಯದಲ್ಲಿಯೂ ಉಳಿಸಬೇಕಾಗಿದೆ, ಮೂಲ್ಕಿಯಲ್ಲಿ ಬಹು ದಿನಗಳ ಬೇಡಿಕೆಯಂತೆ 53ನೇ ಶಾಖೆಯನ್ನು ಮೇ.30ರಂದು ತೆರೆಯಲಾಗುವುದು ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸುವರ್ಣ ಹೇಳಿದರು.
ಮೂಲ್ಕಿಯ ಬಿಲ್ಲವ ಸಂಘದಲ್ಲಿ ಶುಕ್ರವಾರ ನಡೆದ ಭಾರತ್ ಬ್ಯಾಂಕ್‌ನ ಸ್ನೇಹ ಕೂಟದ ಸಮಾರಂಭದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊಗವೀರ ನಾಯಕ ಹರೀಶ್ ಪುತ್ರನ್ ಮಾತನಾಡಿ ಗ್ರಾಮೀಣ ಭಾಗದ ಜನರತ್ತಲೂ ರಾಷ್ಟ್ರೀಯಕೃತ ಬ್ಯಾಂಕ್ ಬರುತ್ತಿದ್ದು ಮೂಲ್ಕಿ ಅಭಿವೃದ್ಧಿಗೆ ಪೂರಕವಾಗಿ ಬ್ಯಾಂಕ್ ಬೆಳೆಯಲಿ ಹಾಗೂ ಸಹಕಾರವನ್ನು ನೀಡುವಂತಹ ಕೆಲಸದಲ್ಲಿಯೂ ಹಿಂದೆ ಬೀಳಬಾರದು ಎಂದು ಹೇಳಿದರು.
ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಎಂ.ಬಿ.ನೂರ್ ಅಹ್ಮದ್, ಮೂಲ್ಕಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಯೋಗಿಶ್ ಕೋಟ್ಯಾನ್, ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಭಾಸ್ಕರ ಸಾಲ್ಯಾನ್, ವಿನೋಬ್‌ನಾಥ್ ಐಕಳ, ದೊಂಬ ಪೂಜಾರಿ ಉಪಸ್ಥಿತರಿದ್ದರು.
ಮೂಲ್ಕಿ ಶಾಕೆಯ ಪ್ರಬಂಧಕ ಲಕ್ಷ್ಮೀನಾರಾಯಣ ಸ್ವಾಗತಿಸಿದರು, ಬ್ಯಾಂಕಿನ ಸಹಾಯಕ ಆಡಳಿತ ನಿರ್ದೇಶಕ ನಿತ್ಯಾನಂದ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು, ಹಿರಿಯ ಪ್ರಬಂಧಕ ಬಾಲಕೃಷ್ಣ ಕರ್ಕೇರಾ ವಂದಿಸಿದರು.

Kinnigoli-13051302

Comments

comments

Leave a Reply

Read previous post:
ಪವರ್ ಲಿಪ್ಟಿಂಗ್ ಸಲಕರಣೆ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಪವರ್ ಲಿಪ್ಟಿಂಗ್ ಸಲಕರಣೆಗಳನ್ನು ಏಕಲವ್ಯ ಪ್ರಶಸ್ತಿ ವಿಜೇತ ಸತೀಶ್ ಕುಮಾರ್ ಕುದ್ರೋಳಿ ಉದ್ಘಾಟಿಸಿದರು. ಮುಂಬಯಿ ಉದ್ಯಮಿ ಸುರೇಶ್...

Close