ಜನರ ಸಹಕಾರ ಅಗತ್ಯ- ಎಎಸ್‌ಐ ಚಂದ್ರಹಾಸ ಅಮಿನ್

Narendra Kerekad
ಕಿನ್ನಿಗೋಳಿ: ಕಾನೂನು ಸುವ್ಯವಸ್ಥೆಂiiಲ್ಲಿ ಪೊಲೀಸ್‌ರೊಂದಿಗೆ ಜನರು ಸಹಕಾರ ನೀಡಿದಲ್ಲಿ ಪ್ರತಿಯೊಬ್ಬ ನಾಗರಿಕನ ರಕ್ಷಣೆಗೆ ಸಹಕಾರ ಆಗುತ್ತದೆ, ಹೆದ್ದಾರಿಯಲ್ಲಿನ ಸಂಚಾರದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಂಘ ಸಂಸ್ಥೆಗಳು ಪರಸ್ಪರ ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಮೂಲ್ಕಿ ಠಾಣೆಯ ಎಎಸ್‌ಐ ಚಂದ್ರಹಾಸ ಅಮಿನ್ ಹೇಳಿದರು.
ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿನ ಹೆದ್ದಾರಿ 66ರಲ್ಲಿನ ಬಪ್ಪನಾಡು ಚೆಕ್ ಪಾಯಿಂಟ್‌ನಲ್ಲಿ ಸಂಚರಿಸುವ ವಾಹನಗಳಿಗೆ ಮುಂಜಾಗ್ರತಾ ಕ್ರಮವಾಗಿ ಚೆಕ್ ಪೋಸ್ಟ್‌ಗೆ ರಿಫ್ಲೇಕ್ಟರ್ ಸೂಚನಾ ಫಲಕಗಳನ್ನು ಕೋಟೆಕೇರಿಯ ನವಗುರ್ಗಾ ಯುವಕ ವೃಂದದ ಸಂಯೋಜನೆಯಲ್ಲಿ ಶುಕ್ರವಾರ ಮೂಲ್ಕಿ ಠಾಣೆಯ ವೃತ್ತ ನಿರೀಕ್ಷಕ ಶೇಖ್ ಹುಸೇನ್‌ರವರಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವದುರ್ಗಾ ಯುವಕ ವೃಂದದ ಪ್ರಮುಖರಾದ ಜಯ ಪೂಜಾರಿ ಮಾನಂಪಾಡಿ, ಸದಾನಂದ ಸುವರ್ಣ, ಉದಯ ಅಮಿನ್ ಮಟ್ಟು, ಸುರೇಶ್, ಸುಂದರ್ ಅಂಚನ್, ಕೃಷ್ಣ, ಪೊಲೀಸ್‌ರಾದ ಸಂಜೀವ, ರವಿ, ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

Mulki-14051301

Comments

comments

Leave a Reply

Read previous post:
ಭಾರತ್ ಬ್ಯಾಂಕ್ ರಾಷ್ಟ್ರದಲ್ಲಿ 5ನೇ ಸ್ಥಾನ

Narendra Kerekad ಕಿನ್ನಿಗೋಳಿ: ರಾಷ್ಟ್ರಮಟ್ಟದಲ್ಲಿ1,800 ಕೋ ಆಪರೇಟಿವ್ ಬ್ಯಾಂಕ್‌ನ ಸ್ಥಾನಮಾನದಲ್ಲಿ ಭಾರತ್ ಬ್ಯಾಂಕ್ 5ನೇ ಸ್ಥಾನದಲ್ಲಿದ್ದು ಇದು ಜನರ ಪ್ರೋತ್ಸಾಹದಲ್ಲಿ ಬೆಳೆದಂತಹ ಬ್ಯಾಂಕ್ ಎನ್ನುವ ಕೀರ್ತಿಯನ್ನು ಭವಿಷ್ಯದಲ್ಲಿಯೂ ಉಳಿಸಬೇಕಾಗಿದೆ,...

Close