ಉಲ್ಲಂಜೆ ವೈದಕೀಯ ಶಿಬಿರ

ಕಿನ್ನಿಗೋಳಿ : ಜೀವ ರಕ್ಷಣೆಗೆ ಮಿಗಿಲಾದ ಸೇವೆ ಇಲ್ಲ ಆರೋಗ್ಯ ರಕ್ಷಣೆಗೆ ಶಿಬಿರ ಪೂರಕ. ಸಂಘ ಸಂಸ್ಥೆಗಳು ಸಮಾಜ ಉಪಯೋಗಿ ಕಾರ್ಯಗಳನ್ನು ಮಾಡಬೇಕು ಎಂದು ಶ್ರೀನಿವಾಸ ಸಮೂಹ ಸಂಸ್ಥೆ ನಿರ್ದೇಶಕ ಎಂ.ಆರ್.ವಾಸುದೇವ ಹೇಳಿದರು
ಶಕ್ತಿ ಫ್ರೆಂಡ್ಸ್ ಉಲ್ಲಂಜೆ ಇದರ ವಾರ್ಷಿಕೋತ್ಸವದ ಅಂಗವಾಗಿ ಶ್ರೀನಿವಾಸ ಆಸ್ಪತ್ರೆ ಮುಕ್ಕ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಜಂಟೀ ಆಶ್ರಯದಲ್ಲಿ ಭಾನುವಾರ ಉಲ್ಲಂಜೆಯಲ್ಲಿ ನಡೆದ ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಜಯರಾಮ ಮುಕ್ಕಾಲ್ದಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಸಂಜೀವ ಅಂಚನ್, ಉಲ್ಲಂಜೆ ದ.ಕ ಹಿ. ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ದಯಾನಂದ ಶೆಟ್ಟಿ, ಡಾ| ಜನಾರ್ದನ ಕರ್ನಲ್, ಶಕ್ತಿ ಫ್ರೆಂಡ್ಸ್ ಉಲ್ಲಂಜೆ ಕ್ಲಬ್‌ನ ಅಧ್ಯಕ್ಷ ನಿತಿನ್ ಕುಮಾರ್ ಉಪಸ್ಥಿತರಿದ್ದರು. ಸಂದೇಶ್ ಶೆಟ್ಟಿ ಸ್ವಾಗತಿಸಿದರು, ವಾಸು ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಜನರ ಸಹಕಾರ ಅಗತ್ಯ- ಎಎಸ್‌ಐ ಚಂದ್ರಹಾಸ ಅಮಿನ್

Narendra Kerekad ಕಿನ್ನಿಗೋಳಿ: ಕಾನೂನು ಸುವ್ಯವಸ್ಥೆಂiiಲ್ಲಿ ಪೊಲೀಸ್‌ರೊಂದಿಗೆ ಜನರು ಸಹಕಾರ ನೀಡಿದಲ್ಲಿ ಪ್ರತಿಯೊಬ್ಬ ನಾಗರಿಕನ ರಕ್ಷಣೆಗೆ ಸಹಕಾರ ಆಗುತ್ತದೆ, ಹೆದ್ದಾರಿಯಲ್ಲಿನ ಸಂಚಾರದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಂಘ ಸಂಸ್ಥೆಗಳು ಪರಸ್ಪರ...

Close