ಕ್ರಿಕೆಟ್ ಪಂದ್ಯಾಟ- ಮಾರುತಿ ಕ್ರಿಕೆಟರ್ಸ್ ಮುಕ್ಕ ಪ್ರಥಮ

ಕಿನ್ನಿಗೋಳಿ: 24ನೇ ವರ್ಷದ ದಿ| ಬೂಬ ದೇವಾಡಿಗ ಕ್ರಿಕೆಟ್ ಪಂದ್ಯಾಟವು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಇತ್ತೀಚೆಗೆ ತೋಕೂರು ಶಾಲಾ ಮೈದಾನದಲ್ಲಿ ನಡೆಯಿತು. ಪ್ರಥಮ ಪ್ರಶಸ್ತಿ ಹಾಗೂ ಟ್ರೋಫಿಯನ್ನು ಮಾರುತಿ ಕ್ರಿಕೆಟರ‍್ಸ್ ಮುಕ್ಕ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಅಂಜನೇಯ ಸಸಿಹಿತ್ಲು ತಂಡ ಪಡೆದುಕೊಂಡಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಮಣ್ಣ ದೇವಾಡಿಗ, ಗ್ರಾ. ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಮೂಲ್ಕಿ ನಗರ ಪಂ. ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಗ್ರಾ. ಪಂ. ಸದಸ್ಯ ನಾರಾಯಣ ಪೂಜಾರಿ, ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಗಣೇಶ್, ಪ್ರಶಾಂತ್ ಕುಮಾರ್ ಬೇಕಲ್, ಗಣೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-17051301

Comments

comments

Leave a Reply

Read previous post:
ಉಲ್ಲಂಜೆ ವೈದಕೀಯ ಶಿಬಿರ

ಕಿನ್ನಿಗೋಳಿ : ಜೀವ ರಕ್ಷಣೆಗೆ ಮಿಗಿಲಾದ ಸೇವೆ ಇಲ್ಲ ಆರೋಗ್ಯ ರಕ್ಷಣೆಗೆ ಶಿಬಿರ ಪೂರಕ. ಸಂಘ ಸಂಸ್ಥೆಗಳು ಸಮಾಜ ಉಪಯೋಗಿ ಕಾರ್ಯಗಳನ್ನು ಮಾಡಬೇಕು ಎಂದು ಶ್ರೀನಿವಾಸ ಸಮೂಹ ಸಂಸ್ಥೆ...

Close