ದೈಹಿಕ ಅಭಿವೃದ್ದಿ ಹೊಂದಬೇಕು: ಸತೀಶ್ ಕುಮಾರ್ ಕುದ್ರೋಳಿ

ಕಿನ್ನಿಗೋಳಿ: ಪಠ್ಯದ ಜೋತೆಗೆ ಪಾಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಯುವಜನರು ತೊಡಗಿಸಿಕೊಂಡು ಮಾನಸಿಕ ಬೌದ್ಧಿಕ ಹಾಗೂ ದೈಹಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಏಕಲವ್ಯ ಪ್ರಶಸ್ತಿ ವಿಜೇತ ಪವರ್ ಲಿಪ್ಟರ್ ಸತೀಶ್ ಕುಮಾರ್ ಕುದ್ರೋಳಿ ಹೇಳಿದರು.
ಕಿನ್ನಿಗೋಳಿ ರಾಜರತ್ನಪುರದಲ್ಲಿ ನಡೆದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪವರ್ ಲಿಪ್ಟಿಂಗ್‌ನಲ್ಲಿ ಸಾಧನೆಗೈದ ಅಕ್ಷತಾ ಪೂಜಾರಿ ಬೋಳ, ದುರ್ಗಾಪ್ರಸಾದ್ ಶೆಟ್ಟಿ, ಕರಾಟೆಯಲ್ಲಿ ಸಾಧನೆಗೈದ ಚಿರಾಗ್ ಶೆಟ್ಟಿ, ಸಮೀಕ್ಷಾ ಕಟೀಲು, ಕಾವ್ಯ, ನಿಹಾಲ್ ಅಹಮದ್, ಶಯನ್ ಶೆಟ್ಟಿ, ದೇಹರ್ದಾಡ್ಯ ದಲ್ಲಿ ಸಾಧನೆಗೈದ ಅಭಿಲಾಷ್ ಶೆಟ್ಟಿ, ಗಿರೀಶ್, ಮನೋಹರ್, ಹರೀಶ್, ದೇವೀಶ್ ಹಾಗೂ ಚಂದ್ರಶೇಖರ್ ಅವರನ್ನು ವ್ಯಾಯಾಮ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಮುಂಬಯಿ ಉದ್ಯಮಿ ಸುರೇಶ್ ರಾಮ್ ಕೋಟ್ಯಾನ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಉಪಸ್ಥಿತರಿದ್ದರು.
ಜಿಮ್ ತರಬೇತುದಾರ ಕೇಶವ ಕರ್ಕೆರ ಸ್ವಾಗತಿಸಿದರು. ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಈಶ್ವರ್ ಕಟೀಲ್ ಪ್ರಸ್ತಾವನೆಗೈದು ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು..

Kinnigoli-17051302

Comments

comments

Leave a Reply

Read previous post:
ಕ್ರಿಕೆಟ್ ಪಂದ್ಯಾಟ- ಮಾರುತಿ ಕ್ರಿಕೆಟರ್ಸ್ ಮುಕ್ಕ ಪ್ರಥಮ

ಕಿನ್ನಿಗೋಳಿ: 24ನೇ ವರ್ಷದ ದಿ| ಬೂಬ ದೇವಾಡಿಗ ಕ್ರಿಕೆಟ್ ಪಂದ್ಯಾಟವು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಇತ್ತೀಚೆಗೆ ತೋಕೂರು ಶಾಲಾ ಮೈದಾನದಲ್ಲಿ ನಡೆಯಿತು....

Close