ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ : ಕೇಂದ್ರದ ತಂಡದಿಂದ ಅಧ್ಯಯನ

Mithun Kodethoor
ನಿಡ್ಡೋಡಿ : ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣದ ಕುರಿತಾಗಿ ಅಧ್ಯಯನ ನಡೆಸಲು ಗುರುವಾರ ಕೇಂದ್ರ ಇಂಧನ ಇಲಾಖೆಯ ಮೂವರು ಅಧಿಕಾರಿಗಳು ನಿಡ್ಡೋಡಿ ಬಂಗೇರಪದವು ಕೊಲತ್ತಾರು ಪ್ರದೇಶದಲ್ಲಿ ಬಂದ ಸಂದರ್ಭ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೇಂದ್ರದ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಯ ಭೂಸ್ವಾಧೀನ ಅಧಿಕಾರಿಗಳು, ಮೆಸ್ಕಾಂ, ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಮತ್ತಿತರ ಅಧಿಕಾರಿಗಳಿದ್ದರು.
ಸ್ಥಾವರ ವಿರೋಧಿ ಹೋರಾಟಗಾರರಾದ ಕಿರಣ್ ಮಂಜನಬೈಲು, ಜನಾರ್ದನ ಗೌಡ, ಜೋಕಿಂ ಕೊರೆಯಾ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಮಂದಿ ಸ್ಥಳೀಯರು ಜಮಾಯಿಸಿದ್ದರು. ಅಧ್ಯಯನಕ್ಕೆ ಬಂದ ಅಧಿಕಾರಿಗಳು ಒಂದಿಷ್ಟು ಗದ್ದೆ ತೋಟ ನೋಡಿ ಹೋದರು.
ಈ ಬಗ್ಗೆ ದೆಹಲಿಯಲ್ಲಿರುವ ಶಾಸಕ ಅಭಯಚಂದ್ರರಿಗೆ ಸ್ಥಳೀಯರು ದೂರು ನೀಡಿದಾಗ, ತನ್ನ ತಂದೆಯ ಆಣೆಯಾಗಿ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಆಗಲು ಬಿಡುವುದಿಲ್ಲ. ಹೋರಾಟದ ಹಿಂದೊಂದು ಮುಂದೊಂದು ಆಡುವುದಿಲ್ಲ ಎಂದು ತಿಳಿಸಿದರು.
ಹೋರಾಟವನ್ನು ಬಲಗೊಳಿಸಲು ಶುಕ್ರವಾರ ಸ್ಥಳೀಯರ ಸಭೆ ಕರೆಯಲಾಗಿದೆ.

Niddodi-17051301

Niddodi-17051302

Niddodi-17051303

Niddodi-17051304

Niddodi-17051305

Niddodi-17051306

Niddodi-17051307

Niddodi-17051308

 

Comments

comments

Leave a Reply

Read previous post:
ದೈಹಿಕ ಅಭಿವೃದ್ದಿ ಹೊಂದಬೇಕು: ಸತೀಶ್ ಕುಮಾರ್ ಕುದ್ರೋಳಿ

ಕಿನ್ನಿಗೋಳಿ: ಪಠ್ಯದ ಜೋತೆಗೆ ಪಾಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಯುವಜನರು ತೊಡಗಿಸಿಕೊಂಡು ಮಾನಸಿಕ ಬೌದ್ಧಿಕ ಹಾಗೂ ದೈಹಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಏಕಲವ್ಯ ಪ್ರಶಸ್ತಿ ವಿಜೇತ ಪವರ್ ಲಿಪ್ಟರ್ ಸತೀಶ್...

Close