ಕಿನ್ನಿಗೋಳಿ ಮಾತೃಭೂಮಿ 5ನೇ ಶಾಖೆ ಶುಭಾರಂಭ

ಕಿನ್ನಿಗೋಳಿ: “ಗ್ರಾಹಕರ ಪ್ರೀತಿ ವಿಶ್ವಾಸಗಳಿಸಿ, ನಗುಮುಖದಿಂದ ಸೇವೆಗೈದು ಜನರನ್ನು ಆಕರ್ಷಿಸಿ ತನ್ನ ಉದ್ದೇಶವನ್ನು ಬೇಗನೇ ಪೂರೈಸಿಕೊಳ್ಳುವ ಜೊತೆಗೆ ಬಹಳ ಬೇಗನೇ ಬೆಳೆಯಲಿ, ಇ ಸ್ಟಾಂಪ್ ವ್ಯವಸ್ಥೆಯನ್ನು ಕಿನ್ನಿಗೋಳಿಯಲ್ಲಿ ಪ್ರಥಮ ಬಾರಿಗೆ ಆರಂಭಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಿದ ಬ್ಯಾಂಕ್ ಅಭಿವೃದ್ಧಿ ಹೊಂದಲಿ” ಎಂದು ಶಾಖೆಯನ್ನು ಉದ್ಘಾಟಿಸಿದ ಕಿನ್ನಿಗೋಳಿ ಜಿ.ಎಸ್.ಬಿ. ಸಮಾಜ ಅಧ್ಯಕ್ಷ ಅಚ್ಯುತ ಮಲ್ಯ ಶುಭ ಹಾರೈಸಿದರು.

ಕಿನ್ನಿಗೋಳಿ ಉಟೋಪಿಯಾ ಸೌಧದ ಮೊದಲ ಮಹಡಿಯಲ್ಲಿ “ಮಾತೃಭೂಮಿ ವಿವಿಧೋದ್ದೇಶ ಸೌಹಾರ್ದನಿ ” ಬ್ಯಾಂಕಿನ ಶಾಖೆಯು ವಿದ್ಯುಕ್ತವಾಗಿ ಶುಭಾರಂಭಗೊಂಡ ಸಂದರ್ಭದಲ್ಲಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ ಸಮಾಜದೊಂದಿಗೆ ಬೆರೆತು ಅವರ ಆಶೋತ್ತರಕ್ಕೆ ಸ್ಪಂದಿಸುವ ಉತ್ತಮ ಆಡಳಿತ ಮಂಡಳಿ ಈ ಬ್ಯಾಂಕಿಗಿದೆ. ಆದ್ದರಿಂದ ಆರ್ಥಿಕ ವ್ಯವಹಾರ ಕ್ಷೇತ್ರದಲ್ಲಿ ಯಶಸ್ವಿಯಾಗುವಲ್ಲಿ ಸಂದೇಹವಿಲ್ಲ. “ಮಾತೃಭೂಮಿಯ ಈ ೫ನೇ ಶಾಖೆ ಜನಮಾನಸವನ್ನೂ ಗೆಲ್ಲಲಿ” ಎಂದರು.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೆ.ಜಿ.ಮಲ್ಯ, ಪಂಜ ಶಾಂತಾರಾಂ ಶೆಟ್ಟಿ, ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ಅರವಿಂದ ಬಿ. ಬ್ಯಾಂಕಿನ ಅಧ್ಯಕ್ಷ ಭಾಸ್ಕರ ದೇವಸ್ಯ, ಬ್ಯಾಂಕ್ ನಿರ್ದೇಶಕ ಪೂವಪ್ಪ ಕುಂದರ್, ಭಾಸ್ಕರ ಶೆಟ್ಟಿ ಪೊಳಲಿ, ವೇಂಕಟೇಶ್ ನಾವಡ, ವಿದ್ಯಾಕಾಮತ್, ಪಾವನಾ ಜೆ ಶೆಟ್ಟಿ, ಹರೀಶ್, ಸಂತೋಷ..ಮತ್ತಿತರರು ಉಪಸ್ಥಿತರಿದ್ದರು
ಡಾ. ಸೋಂದಾ ಭಾಸ್ಕರ ಭಟ್ ಸ್ವಾಗತಿಸಿದರು, ನಿ.ಜ. ಕೃಷ್ಣ ಕೊಂಪದವು ವಂದಿಸಿದರು,
ಉದ್ಘಾಟನೆಯ ಅನಂತರ ಠೇವಣಿ ಸಂಗ್ರಹ ಹಾಗೂ ಚಾಲ್ತಿ ಖಾತೆಯ ನೊಂದಣಿ ನಡೆದವು.

Mulki-18051303

Comments

comments

Leave a Reply

Read previous post:
ಮೂಲ್ಕಿ; ಕೊಲ್ನಾಡುವಿನಲ್ಲಿ ಅಪಘಾತ

Narendra Kerekadu ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಕೊಲ್ನಾಡುವಿನ ಭಾರತ್ ಆಟೋಮೊಬೈಲ್ಸ್‌ನ ಬಳಿ ಸಂಭವಿಸಿದ ಅಪಘಾತವೊಂದರಲ್ಲಿ ಬೈಕಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ...

Close