ಮೂಲ್ಕಿ; ಕೊಲ್ನಾಡುವಿನಲ್ಲಿ ಅಪಘಾತ

Narendra Kerekadu
ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಕೊಲ್ನಾಡುವಿನ ಭಾರತ್ ಆಟೋಮೊಬೈಲ್ಸ್‌ನ ಬಳಿ ಸಂಭವಿಸಿದ ಅಪಘಾತವೊಂದರಲ್ಲಿ ಬೈಕಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಸವಾರರಾಗಿದ್ದ ಶಿಕ್ಷಕಿಯೋರ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಮೂಲ್ಕಿಯ ಕೆರೆಕಾಡುವಿನ ನಿವಾಸಿ ಕೃಷ್ಣ ಪೂಜಾರಿ ಎಂಬುವವರ ಮಗಳಾದ ಅಮಿತಾ(26) ಎಂಬುವವರೇ ದಾರುಣವಾಗಿ ಸಾವನ್ನಪ್ಪಿದ್ದು, ಈಕೆ ತನ್ನ ಮನೆಯ ಹತ್ತಿರದ ನಿವಾಸಿ ಸತೀಶ್ ಪದ್ಮಶಾಲಿ ಎಂಬುವವರೊಂದಿಗೆ ಸಂಜೆ ಬೈಕ್‌ನಲ್ಲಿ ಮಂಗಳೂರಿನಿಂದ ಮೂಲ್ಕಿಯತ್ತ ಬರುತ್ತಿದ್ದಾಗ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ಸೋಂದು ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಮಿತಾ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬೈಕ್‌ನ್ನು ಚಲಾಯಿಸುತ್ತಿದ್ದ ಸತೀಶ್ ಪದ್ಮಶಾಲಿಗೂ ಸಹ ಬಲ ಕೈ ಹಾಗೂ ಬಲ ಕಾಲಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಅಮಿತಾ ಕಿನ್ನಿಗೋಳಿಯಲ್ಲಿ ಯುಗಪುರುಷ ಕಟ್ಟಡದಲ್ಲಿನ ನಾರಾಯಣ ಗುರು ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದರು, ಪ್ರತಿಭಾವಂತ ಶಿಕ್ಷಕಿಯಾದ ಅಮಿತಾಳಿಗೆ ಬೆಂಗಳೂರಿನ ಹಿರಿಯ ಸಹೋದರಿ ಇದ್ದು, ಕೆರೆಕಾಡಿನಲ್ಲಿ ತಂದೆ ತಾಯಿಯೊಂದಿಗೆ ಮನೆಯ ಆಸರೆಯಾಗಿದ್ದರು. ಮುಕ್ಕದ ಆಸ್ಪತ್ರೆಯಲ್ಲಿ ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲು ತೆರಳಿದ್ದು ಹಿಂದುರುಗುವಾಗ ಈ ದುರ್ಘಟನೆ ಸಂಭವಿಸಿದೆ.

ಮೂಲ್ಕಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಕೊಲ್ನಾಡುವಿನ ಈ ಪ್ರದೇಶ ಅಪಘಾತವಲಯವಾಗಿದ್ದು ಹಲವಾರು ಅಪಘಾತ ಪ್ರಕರಣಗಳು ಸಂಭವಿಸಿದ್ದು ಈ ಬಗ್ಗೆ ಹೆದ್ದಾರಿ ಪ್ರಾಧಿಕಾರವು ಸೂಕ್ತವಾಗಿ ಸ್ಪಂದಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Comments

comments

Leave a Reply

Read previous post:
ಕೆ.ಅಭಯಚಂದ್ರ ಜೈನ್ ಸಚಿವ ಸ್ಥಾನ

Prakash Suvarna ಕಿನ್ನಿಗೋಳಿ: ಕರ್ನಾಟಕ ಸರಕಾರದ ಸಚಿವರಾಗಿ ಕೆ.ಅಭಯಚಂದ್ರ ಜೈನ್ ಆಯ್ಕೆಯಾದರು. ಮೂಲ್ಕಿ ಬಸ್ ನಿಲ್ದಾಣ ಬಳಿ ಕಾಂಗ್ರೇಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.  

Close