ಮುಂಗಾರು ಮಳೆ 2013

Monsoon13

ರಾಜ್ಯದೆಲ್ಲೆಡೆ ಈ ವರ್ಷ ನೀರಿನ ಕೊರತೆ ಕಂಡುಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆ ರಾಜ್ಯಕ್ಕೆ ಒಂದು ವಾರ ತಡವಾಗಿ ಆಗಮಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಬಂಗಾಳ ಕೊಲ್ಲಿಯಲ್ಲಿ ಬೀಸಿರುವ ’ಮಹಾಸೇನ’ ಚಂಡಮಾರುತದಿಂದಾಗಿ ಮುಂಗಾರು ಮಳೆ ತಡವಾಗಿ ರಾಜ್ಯವನ್ನು ಆವರಿಸಲಿದೆ. ಜೂನ್ ೩ರಂದು ಮುಂಗಾರು ಮಳೆ ಕೇರಳಕ್ಕೆ ಮತ್ತು ವಾರದ ನಂತರ ಕರ್ನಾಟಕಕ್ಕೆ ಅಪ್ಪಳಿಸಲಿದೆ. ಕಳೆದ ವರ್ಷ ಮಳೆ ಕಡಿಮೆ ಸುರಿದಿದ್ದು, ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕುಡಿಯಲು ಮತ್ತು ಬಳಸಲು ನೀರಿಲ್ಲದೆ ಸಾರ್ವಜನಿಕರು ತತ್ತರಿಸಿದ್ದಾರೆ. ಮಂಗಳೂರಿನ ಜನತೆಗೆ ಸ್ವಲ್ಪ ಮಟ್ಟಿನ ನೀರಿನ ಕೊರತೆ ಇದೆ. ಕೆಆರ್‌ಎಸ್ ಸಂಪೂರ್ಣ ಬತ್ತಿಹೋಗಿರುವುದರಿಂದ ಬೆಂಗಳೂರು ಮೈಸೂರು ಜಿಲ್ಲೆಗಳಿಗೆ ನೀರಿನ ಪೂರೈಕೆ ಸಮಸ್ಯೆ ತಲೆದೋರಿದೆ. ಮುಂಗಾರು ಆರಂಭವಾಗಿ ಕೆರೆಕಟ್ಟೆಗಳು, ನದಿ ಅಣೆಕಟ್ಟೆಗಳಲ್ಲಿ ಸಾಕಷ್ಟು ನೀರು ಹರಿದು ಬರುವವರೆಗೆ ನೀರಿನ ಬವಣೆ ತಪ್ಪಿದ್ದಲ್ಲ. ಕರಾವಳಿ ಜಿಲ್ಲೆಗಳಲ್ಲಿ ಕಾರ್ಮೋಡಗಳು ಇನ್ನೂ ಆವರಿಸಿಕೊಳ್ಳಲು ಆರಂಭಿಸಿಲ್ಲ. ಕಳೆದ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದ್ದರಿಂದ ಕೆರೆಗಳೆಲ್ಲ ಈಗಾಗಲೆ ಬರಿದಾಗಿವೆ. ಈ ಬಾರಿಯಾದರೂ ಉತ್ತಮ ಮಳೆಯಾಗಲೆಂದು ರೈತರು ವರುಣ ದೇವರ ಮೊರೆ ಹೋಗಿದ್ದಾರೆ.

Comments

comments

Leave a Reply