ಅಭಿವೃದ್ಧಿ ಯುವ ಸಂಘಟನೆಗಳ ಧ್ಯೇಯಯಾಗಿರಬೇಕು

ಕಿನ್ನಿಗೋಳಿ: ಸಮಾಜದ ಅಭಿವೃದ್ಧಿ ಯುವ ಸಂಘಟನೆಗಳ ಧ್ಯೇಯ ಹಾಗೂ ಪ್ರೇರಕ ಶಕ್ತಿಯಾಗಿರಬೇಕು. ದುಶ್ಚಟಗಳಿಂದ ದೂರವಿದ್ದು ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ಮತ್ತು ವಿದ್ಯಾರ್ಥಿಗಳ ಕಲಿಕೆಗಾಗಿ ಪ್ರೋತ್ಸಾಹ ನೀಡಬೇಕು ಎಂದು ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಇತ್ತೀಚಿಗೆ ಉಲ್ಲಂಜೆಯಲ್ಲಿ ನಡೆದ ಯುವ ಶಕ್ತಿ ಫ್ರೆಂಡ್ಸ್ ಉಲ್ಲಂಜೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಟೀಲು ಹಿರಿಯ ಪ್ರಾರ್ಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಜಲಜ ಎಸ್. ಅವರನ್ನು ಸನ್ಮಾನಿಸಲಾಯಿತು.
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಕುಂಜಿರಾಯ ದೈವಸ್ಥಾನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ದಿನೇಶ್ ಆಚಾರ್ಯ, ಉದ್ಯಮಿ ಪ್ರತೀಕ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರೆಕಿ ಲತಾ ಅಮೀನ್, ಉಲ್ಲಂಜೆ ಯುವ ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ನಿತಿನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ವಾಸು ಸಾಲ್ಯಾನ್ ಸ್ವಾಗತಿಸಿದರು, ನಿಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Mulki-21051302

Comments

comments

Leave a Reply

Read previous post:
ಮೂಲ್ಕಿ: ಸಚಿವ ವಿನಯ ಕುಮಾರ್ ಸೊರಕೆ

Prakash Suvarna ಮೂಲ್ಕಿ: ನಗರಾಭಿವೃದ್ಧಿ ಇಲಾಖೆ ಸಚಿವ ವಿನಯ ಕುಮಾರ್ ಸೊರಕೆ ಮೂಲ್ಕಿಗೆ ಆಗಮಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಹಾರ್ದಿಕ ಸ್ವಾಗತ ನೀಡಲಾಯಿತು.

Close