ಲತಾ ಅಮೀನ್ ಬೀಳ್ಕೊಡುಗೆ ಸಮಾರಂಭ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದಲ್ಲಿ 4ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮೇಲ್ವಿಚಾರಕಿ ಲತಾ ಅಮೀನ್ ಅವರನ್ನು ಮೆನ್ನಬೆಟ್ಟು- ಕಿಲೆಂಜೂರು ಒಕ್ಕೂಟದ ವತಿಯಿಂದ ಬುಧವಾರ ಕಿನ್ನಿಗೋಳಿ ವಲಯ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಲತಾ ಅಮೀನ್ ನೂತನ ಮೇಲ್ವಿಚಾರಕ ಪ್ರದೀಪ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 
ಮಂಗಳೂರು ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಭುವನಾಭಿರಾಮ ಉಡುಪ, ಮೆನ್ನಬೆಟ್ಟು- ಕಿಲೆಂಜೂರು ಕಾರ್ಯಕ್ಷೇತ್ರ ಸೇವಾ ನಿರತ ದೇವೇಂದ್ರ, ಕಿನ್ನಿಗೋಳಿ ವಲಯ ಒಕ್ಕೂಟ ಅಧ್ಯಕ್ಷೆ ಸುಜಾತ ಶೆಟ್ಟಿ, ಸೇವಾ ಪ್ರತಿನಿಧಿ ಶೈಲಾ ಶೆಟ್ಟಿ, ಮೆನ್ನಬೆಟ್ಟು- ಕಿಲೆಂಜೂರು ಒಕ್ಕೂಟ ಪದಾಧಿಕಾರಿಗಳಾದ ನಯನ ಶೆಟ್ಟಿ, ಹರೀಶ್.ಕೆ, ತಾರನಾಥ್ ಶೆಟ್ಟಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-22051301

 Kinnigoli-22051302

Comments

comments

Leave a Reply

Read previous post:
ಅಭಿವೃದ್ಧಿ ಯುವ ಸಂಘಟನೆಗಳ ಧ್ಯೇಯಯಾಗಿರಬೇಕು

ಕಿನ್ನಿಗೋಳಿ: ಸಮಾಜದ ಅಭಿವೃದ್ಧಿ ಯುವ ಸಂಘಟನೆಗಳ ಧ್ಯೇಯ ಹಾಗೂ ಪ್ರೇರಕ ಶಕ್ತಿಯಾಗಿರಬೇಕು. ದುಶ್ಚಟಗಳಿಂದ ದೂರವಿದ್ದು ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ಮತ್ತು ವಿದ್ಯಾರ್ಥಿಗಳ ಕಲಿಕೆಗಾಗಿ ಪ್ರೋತ್ಸಾಹ ನೀಡಬೇಕು ಎಂದು ತುಳು...

Close