ಮೇ.26 ಉಳೆಪಾಡಿ ಮಹಾಮ್ಮಾಯಿ ದೇವಳ ಪ್ರತಿಷ್ಠಾ ವರ್ಧಂತಿ

ಕಿನ್ನಿಗೋಳಿ : ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ತೃತೀಯ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವವು ಮೇ.26ರಂದು ನಡೆಯಲಿದೆ. ಬೆಳಿಗ್ಗೆ ಚಂಡಿಕಾಯಾಗ, ಧಾರ್ಮಿಕ ವಿಧಿ ವಿದಾನಗಳು ನಡೆಯಲಿದೆ. ಬಳಿಕ ಧಾರ್ಮಿಕ ಸಭೆಯಲ್ಲಿ ಕರ್ನಾಟಕ ಸರಕಾರದ ಯುವಜನ, ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾಮಂತ, ಉದ್ಯಮಿ ಸುಧಾಕರ ಆಳ್ವ, ಕೆ.ಸದಾಶಿವ ಶೆಟ್ಟಿ, ನ್ಯಾಯವಾದಿ ಬಿಪಿನ್ ಪ್ರಸಾದ್, ಐಕಳ ಗ್ರಾ.ಪಂ ಉಪಾಧ್ಯಕ್ಷ ದಿವಾಕರ ಚೌಟ, ಭಾಗವಹಿಸಲಿರುವರು.
ಈ ಸಂದರ್ಭ ಅಂತಪ್ಪ ನಾಯ್ಗರು, ವಾಸು ಪೂಜಾರಿ ಅವರನ್ನು ಸನ್ಮಾನಿಸಲಾಗುವುದು ಹಾಗೂ ಉತ್ತಮ ಸೇವಾಕಾರ್ಯಗೈದ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಲಾಗುವುದೆಂದು ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಲತಾ ಅಮೀನ್ ಬೀಳ್ಕೊಡುಗೆ ಸಮಾರಂಭ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದಲ್ಲಿ 4ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮೇಲ್ವಿಚಾರಕಿ ಲತಾ ಅಮೀನ್ ಅವರನ್ನು ಮೆನ್ನಬೆಟ್ಟು- ಕಿಲೆಂಜೂರು ಒಕ್ಕೂಟದ ವತಿಯಿಂದ ಬುಧವಾರ ಕಿನ್ನಿಗೋಳಿ...

Close