ಕಿನ್ನಿಗೋಳಿ-ಕೆ.ಜೆಎಂ. ಸಮುದಾಯ ಭವನ ಉದ್ಘಾಟನೆ

ಕಿನ್ನಿಗೋಳಿ : ಜನರ ಆಶೋತ್ತರ ಸಮಸ್ಯೆಗಳು, ಸಮಾಜದ ಅವ್ಯವಸ್ಥಿತ ಕೊರತೆಗಳನ್ನು ಮನಗಂಡು ತಕ್ಕುದಾದ ಸ್ಪಂದನೆ ನೀಡಿ ಸಮಾಜದ ಅಭಿವೃದ್ದಿಗೆ ಶ್ರಮಿಸುವುದೇ ಅಧಿಕಾರಿಗಳು, ಶಾಸಕರು ಹಾಗೂ ಮಂತ್ರಿಗಳ ಆದ್ಯ ಕರ್ತವ್ಯವಾಗಿದೆ. ಎಂದು ಯುವಜನ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರಜೈನ್ ಹೇಳಿದರು.
ಕಿನ್ನಿಗೋಳಿ-ತಾಳಿಪಾಡಿ, ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿಯ, ನೂತನವಾಗಿ ನಿರ್ಮಾಣಗೊಂಡ ಕೆ.ಜೆಎಂ. ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಕೆ.ಜೆಎಂ. ಸಮುದಾಯ ಭವನ ಮಂಗಳೂರು ಸಂಸದ ಹಾಗೂ ಮುಲ್ಕಿ ಮೂಡಬಿದ್ರಿ ಶಾಸಕರ ಅನುದಾನದಿಂದ ನಿರ್ಮಾಣಗೊಂಡಿದೆ. ಸಾಧಕರಾದ ಜೆರಾಲ್ದ್ ಮಿನೇಜಸ್, ವಿವೇಕಾನಂದ, ತ್ಯಾಗರಾಜ್, ಸೈಯದ್ ಹಾಜಿ ಕರ್ನಿರೆ, ಶೇಕುಂಜ್ ಹಾಜಿ, ಪಿ.ಎಸ್. ಅಕ್ಬರ್ ಹುಸೇನ್ ಪುನರೂರು ಅವರನ್ನು ಸನ್ಮಾನಿಸಲಾಯಿತು.
ಜಾಫರ್ ಸಾದಿಕ್ ತಂಗಳ್ ಕುಂಬೋಳ್, ಧರ್ಮಗುರುಗಳಾದ ಪಿ.ಜೆ. ಅಹಮ್ಮದ್ ಮದನಿ, ಹಾಜಿ ಅಸ್ಗರ್ ಪೆಝಿ, ಅಲ್ ಹಾಜ್ ಎಚ್. ಐ. ಅಬು ಸೂಪಿಯಾನ್ ಮದನಿ, ಮಂಗಳೂರು ದಕ್ಷಿಣದ ಶಾಸಕ, ಮೊದಿನ್ ಭಾವ, ಕರ್ನಾಟಕ ಅಲ್ಪ ಸಂಖ್ಯಾಕರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ಬಿ. ಅಬೂಬಕ್ಕರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಡಿಸೋಜ, ಎ.ಪಿ.ಎಂ.ಸಿ ಸದಸ್ಯ ಪ್ರಮೋದ್ ಕುಮಾರ್, ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಗುರುರಾಜ ಪೂಜಾರಿ, ಹಾಜಿ ವಿ. ಮಹಮ್ಮದ್, ಬಿ. ಎಸ್. ಹುಸೈನ್, ಯಾಕೂಬ್ ಇಡ್ಯಾ ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡ ಸಮಿತಿ ಕಾರ್ಯದರ್ಶಿ ಟಿ.ಕೆ. ಅಬ್ದುಲ್ ಕಾದರ್ ಸ್ವಾಗತಿಸಿ, ಅಧ್ಯಕ್ಷ ಟಿ.ಎಚ್. ಮಯ್ಯದ್ದಿ ಪ್ರಸ್ತಾವನೆಗೈದು, ಅಬೂಬಕ್ಕರ್ ವಂದಿಸಿದರು. ಅಬ್ದುಲ್ ಜಲೀಲ್ ವರದಿ ವಾಚಿಸಿ, ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Kinnigoli27051302

Comments

comments

Leave a Reply

Read previous post:
ದೇವಸ್ಥಾನ ಶೃದ್ಧಾ ಕೇಂದ್ರವಾಗಬೇಕು – ದುಗ್ಗಣ್ಣ ಸಾವಂತ

ಕಿನ್ನಿಗೋಳಿ : ದೇವಸ್ಥಾನ ಹಾಗೂ ದೈವಸ್ಥಾನಗಳು ಶೃದ್ಧಾ ಕೇಂದ್ರಗಳಾಬೇಕು ಹಾಗೂ ಸಂಸ್ಕೃತಿ ಸಂಸ್ಕಾರ ಶಿಷ್ಟಾಚಾರ ರೂಪಿಸುವ ಕೇಂದ್ರಗಳಾಗಬೇಕು ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು. ಉಳೆಪಾಡಿ...

Close