ದೇವಸ್ಥಾನ ಶೃದ್ಧಾ ಕೇಂದ್ರವಾಗಬೇಕು – ದುಗ್ಗಣ್ಣ ಸಾವಂತ

ಕಿನ್ನಿಗೋಳಿ : ದೇವಸ್ಥಾನ ಹಾಗೂ ದೈವಸ್ಥಾನಗಳು ಶೃದ್ಧಾ ಕೇಂದ್ರಗಳಾಬೇಕು ಹಾಗೂ ಸಂಸ್ಕೃತಿ ಸಂಸ್ಕಾರ ಶಿಷ್ಟಾಚಾರ ರೂಪಿಸುವ ಕೇಂದ್ರಗಳಾಗಬೇಕು ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಳದಲ್ಲಿ ಭಾನುವಾರ ನಡೆದ ಪ್ರತಿಷ್ಠಾ ವರ್ಧಂತಿಯ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭ ಸಾಧಕರನ್ನು ಸನ್ಮಾನಿಸಲಾಯಿತು.
ಮಂಗಳೂರು ದಕ್ಷಿಣ ಶಾಸಕ ಮೊದಿನ್ ಭಾವ, ವಕೀಲ ಶಂಭು ಶರ್ಮ, ಐಕಳ ಪಂಚಾಯಿತಿ ಸದಸ್ಯ ರಾಜೇಶ್ ಶೆಟ್ಟಿ, ಇಂಜೀನಿಯರ್ ಸಂತೋಷ್ ಕುಮಾರ್, ವೈ.ಕೆ ಸಾಲ್ಯಾನ್, ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಕ್ಷೇತ್ರದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli27051301

Comments

comments

Leave a Reply

Read previous post:
ಕಟೀಲು: ಪತ್ತನಾಜೆ ಸೇವೆಯಾಟ

Raghunath Kamath ಕಟೀಲು: ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಐದು ಮೇಳಗಳ ತಿರುಗಾಟ ವರ್ಷದ ಕೊನೆಯ ಸೇವೆಯಾಟ ದೇವಳದ ರಥ ಬೀದಿಯಲ್ಲಿ ಏಕಕಾಲದಲ್ಲಿ ನಡೆಯಿತು.  

Close