ಮೂಲ್ಕಿಯಲ್ಲಿ ಸಚಿವ ಅಭಯಚಂದ್ರರ ವಿಜಯೋತ್ಸವ

Narendra Kerekadu

ಮೂಲ್ಕಿ; ಮೂಲ್ಕಿಯಲ್ಲಿ ಮಂಗಳವಾರ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವರಾದ ಕೆ.ಅಭಯಚಂದ್ರ ಜೈನ್‌ರವರನ್ನು ಸಾರ್ವಜನಿಕವಾಗಿ ವಿಜಯೋತ್ಸವವನ್ನು ಆಚರಿಸುವ ಮೂಲಕ ಕಾಂಗ್ರೇಸ್ ಕಾರ್ಯಕರ್ತರು ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು.

ಮೂಲ್ಕಿಯ ಗಾಂಧಿ ಮೈದಾನದಲ್ಲಿ ಕೆ.ಅಭಯಚಂದ್ರ ಜೈನ್‌ರವರನ್ನು ಸಾರ್ವಜನಿಕವಾಗಿ ವಿಜಯೋತ್ಸವವನ್ನು ಕಾಂಗ್ರೇಸ್ ಕಾರ್ಯಕರ್ತರು ತೆರೆದ ಜೀಪಿನಲ್ಲಿ ಕಾರ್ನಾಡು ಗಾಂಧಿ ಮೈದಾನದಿಂದ ಕಾರ್ನಾಡು ಸದಾಶಿವ ರಾವ್‌ರವರ ಪ್ರತಿಮೆಗೆ ಹೂಹಾರ ಹಾಕಿ ಮೆರವಣಿಗೆ ಪ್ರಾರಂಭಿಸಿ ಮೂಲ್ಕಿ, ಪಡುಪಣಂಬೂರು, ಸಸಿಹಿತ್ಲು, ಹಳೆಯಂಗಡಿ, ಕೆಮ್ರಾಲ್, ಕಿನ್ನಿಗೋಳಿ, ಮೆನ್ನಬೆಟ್ಟು, ಐಕಳ, ಬಳ್ಕುಂಜೆ, ಕಿಲ್ಪಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಾಗಿ ವಿವಿಧ ಘೋಷಣೆಗಳನ್ನು ಕೂಗುತ್ತಾ ನೂರಾರು ಕಾರ್ಯಕರ್ತರು ಭಾಗವಹಿಸಿದರು.
ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ವಸಂತ ಬೆರ್ನಾರ್ಡ್, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಸದಸ್ಯರಾದ ಬಿ.ಎಂ.ಆಸಿಫ್, ಪುತ್ತುಬಾವ, ಕಾಂಗ್ರೇಸ್ ಪ್ರಮುಖರಾದ ಧನಂಜಯ ಕೋಟ್ಯಾನ್ ಮಟ್ಟು, ಕಮಲಾಕ್ಷ ಬಡಗುಹಿತ್ಲು, ಫ್ರಭಾಕರ, ನೇಮಿರಾಜ್ ಜೈನ್, ಅಬ್ದುಲ್ ರಜಾಕ್, ಎಂ.ಬಿ.ನೂರ್ ಮಹಮ್ಮದ್, ಗೋಪಿನಾಥ ಪಡಂಗ, ರಿಚರ್ಡ್ ಡಿಸೋಜಾ, ಮಯ್ಯದ್ದಿ, ಜೊಸ್ಸಿ ಪಿಂಟೋ, ವಿಮಲ ಪೂಜಾರ್ತಿ, ಶಾಲೆಟ್ ಪಿಂಟೋ, ಟಿ.ಎಚ್.ಮಯ್ಯದ್ದಿ, ಪ್ರಕಾಶ್ ಆಚಾರ್ಯ, ಗಂಗಾಧರ ಪೂಜಾರಿ, ಉಮೇಶ್ ಕೋಟ್ಯಾನ್, ಶೈಲಾ ಸಿಕ್ವೇರಾ, ತಿಮ್ಮಪ್ಪ ಕೋಟ್ಯಾನ್ ಇನ್ನಿತರರು ಹಾಜರಿದ್ದರು.
ವಿಜಯೋತ್ಸವದ ಸಂಚಾರದ ಉದ್ದಕ್ಕೂ ಅಭಿಮಾನಿಗಳು, ಕಾಂಗ್ರೇಸ್ ಕಾರ್ಯಕರ್ತರು ಸಚಿವರಿಗೆ ಹಾರವನ್ನು ಹಾಕಿ ಶುಭಕೋರಿದರು.

 Mulki28051301

Comments

comments

Leave a Reply

Read previous post:
ಕಟೀಲು: ವೈದ್ಯಕೀಯ ಶಿಬಿರ

Mithun Kodetoor ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಶ್ರೀನಿವಾಸ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಮುಕ್ಕ ಮತ್ತು ಝೇಂಕಾರ...

Close