ಕೆ.ಅಭಯಚಂದ್ರಜೈನ್ ಅಭಿನಂದನಾ ಕಾರ್ಯಕ್ರಮ

Narendra Kerekadu
ಮೂಲ್ಕಿ; “ತಾನು ಸಚಿವನಾದರು ಇಂದಿಗೂ ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತನಾಗಿರಲು ಬಯಸುತ್ತೇನೆ, ಅಧಿಕಾರ ಇದ್ದರು, ಇಲ್ಲಿದಿದ್ದರೂ ಜನಸೇವಕನಾಗಿರುತ್ತೇನೆ”. ಮೂಡಬಿದಿರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವಿಗೆ ಕಾರಣರಾದ ಕಾರ್ಯಕರ್ತರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮೆಲ್ಲರ ನಿಲುವು ಪಕ್ಷದ ಅಭ್ಯರ್ಥಿ ಜನಾರ್ದನ ಪೂಜಾರಿಯನ್ನು ಗೆಲ್ಲಿಸುವವರೆಗೂ ಶ್ರಮವಹಿಸುತ್ತೇವೆ ಅಲ್ಲಿಯವರೆಗೂ ವಿರಮಿಸುವುದಿಲ್ಲ ಎಂಬ ಪಣವನ್ನು ತೊಡಬೇಕು ಎಂದು ಯುವಜನ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರಜೈನ್ ಹೇಳಿದರು.
ಮಂಗಳವಾರ ಸಂಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಲ್ಕಿ ಪಟ್ಟಣ ಪಂಚಾಯಿತಿಯಿಂದ ಮೀನುಗಾರ ಮಹಿಳೆಯರಿಗೆ ಶೀಥಲೀಕರಣ ಬಾಕ್ಸ್‌ನ್ನು ಸಚಿವರು ವಿತರಿಸಿದರು.
ರಾಷ್ಟ್ರೀಯ ಬಿಲ್ಲವ ಅಧ್ಯಕ್ಷ ಜಯ ಸುವರ್ಣ, ಹಿರಿಯ ಜಾನಪದ ವಿದ್ವಾಂಸ ಡಾ.ಗಣೇಶ್ ಅಮಿನ್ ಸಂಕಮಾರ್, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ವಸಂತ ಬೆರ್ನಾರ್ಡ್, ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಬಿ.ಎಂ.ಆಸೀಫ್, ಯುವ ಕಾಂಗ್ರೇಸ್ ಅಧ್ಯಕ್ಷ ರೋಶನ್‌ಕುಮಾರ್, ಧನಂಜಯ ಕೋಟ್ಯಾನ್ ಮಟ್ಟು, ಪೂರ್ಣಿಮಾ ಮಧುಸೂದನ್, ಚಂದ್ರಶೇಖರ ನಾನಿಲ್, ಪ್ರಮೋದ್‌ಕುಮಾರ್, ಅಬ್ದುಲ್ ರಜಾಕ್, ಸರೋಜಿನಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli29051305

Comments

comments

Leave a Reply

Read previous post:
ಮೂಲ್ಕಿ; ಲಾರಿ ಸಹಿತ ಚಾಲಕ ಸೆರೆ

Narendra Kerekadu ಮೂಲ್ಕಿ; ಮೂಲ್ಕಿ ಠಾಣೆಯ ಸಿಬ್ಬಂದಿಯೊಬ್ಬರು ಬಪ್ಪನಾಡು ದೇವಸ್ಥಾನದ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದು ಪೊಲೀಸ್ ಪೇದೆ ಸಾವಿಗೆ ಕಾರಣವಾಗಿದ್ದ ಲಾರಿಯನ್ನು...

Close