ಮೂಲ್ಕಿ; ಲಾರಿ ಸಹಿತ ಚಾಲಕ ಸೆರೆ

Narendra Kerekadu

ಮೂಲ್ಕಿ; ಮೂಲ್ಕಿ ಠಾಣೆಯ ಸಿಬ್ಬಂದಿಯೊಬ್ಬರು ಬಪ್ಪನಾಡು ದೇವಸ್ಥಾನದ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದು ಪೊಲೀಸ್ ಪೇದೆ ಸಾವಿಗೆ ಕಾರಣವಾಗಿದ್ದ ಲಾರಿಯನ್ನು ಮೂಲ್ಕಿ ಪೊಲೀಸರು ಚಿತ್ರದುರ್ಗದಲ್ಲಿ ಪತ್ತೆ ಹಚ್ಚಿ ಆರೋಪಿ ಚಾಲಕನನ್ನು ಬಂದಿಸಿದ್ದಾರೆ.
ಕಳೆದ ಏಪ್ರಿಲ್ 5ರಂದು ಮೂಲ್ಕಿ ಬಪ್ಪನಾಡುವಿನ ವಾಹನ ತಪಾಸಣೆಯನ್ನು ತನ್ನ ಇಬ್ಬರು ಸಹೋದ್ಯೋಗಿಗಳಾದ ಪ್ರಮೋದ್ ಮತ್ತು ಸೀತಾರಾಮ್‌ರೊಂದಿಗೆ ಚುನಾವಣಾ ಪೂರ್ವವಾಗಿ ವಿಶೇಷ ಸಾಗರ ಕವಚ ರಕ್ಷಣೆಯ ಉಸ್ತುವಾರಿಯಲ್ಲಿ ವಾಹನಗಳ ತಪಾಸಣೆಯ ಕರ್ತವ್ಯದಲ್ಲಿದ್ದಾಗ ಮುಂಜಾನೆ 3-30ಕ್ಕೆ ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದರು ಅದು ನಿಲ್ಲದೇ ಏಕಾಏಕಿ ಡಿಕ್ಕಿ ಹೊಡೆದುದರಿಂದ ಶಿವರಾಜಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಡಿಕ್ಕಿ ಹೊಡೆದ ಲಾರಿಯನ್ನು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದುದರಿಂದ ಮೂಲ್ಕಿ ಪೊಲೀಸರು ಈ ಪ್ರಕರಣದ ಬೆನ್ನು ಹಿಡಿದು ಈಗ ಲಾರಿಯನ್ನು ವಶಪಡಿಸಿಕೊಂಡು ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿಯನ್ನು ಚಲಾಯಿಸುತ್ತಿದ್ದ ಚಾಲಕನನ್ನು ದಾವಣಗೆರೆಯ ಬಸವಪುರ ನಿವಾಸಿ ಸಿದ್ದಪ್ಪ ಎಂಬವರ ಪುತ್ರ ಲೋಹಿತ್(23) ಎಂದು ಗುರುತಿಸಲಾಗಿದ್ದು ಈತ ತನ್ನ ಲಾರಿಯಲ್ಲಿ ಎನ್‌ಎಂಪಿಟಿ ಪ್ರದೇಶದಿಂದ ಕಬ್ಬಿಣದ ಸಾಮಗ್ರಿಗಳನ್ನು ಹೇರಿಕೊಂಡು ಬಪ್ಪನಾಡು ಚೆಕ್ ಪೋಸ್ಟ್‌ನಲ್ಲಿ ಪೊಲೀಸ್ ಪೇದೆ ಶಿವರಾಜಪ್ಪನಿಗೆ ಡಿಕ್ಕಿ ಹೊಡೆದು ಎಲ್ಲೂ ನಿಲ್ಲಿಸದೇ ಲಾರಿ ಸಹಿತ ಪರಾರಿಯಾಗಿದ್ದನು.
ಮೂಲ್ಕಿ ಪೊಲೀಸರು ಹೆಜಮಾಡಿ ಬಳಿ ಇರುವ ಸಿ.ಸಿ.ಕ್ಯಾಮರದ ದಾಖಲೆಯನ್ನು ಪರಶೀಲಿಸಿ, ಉಡುಪಿಯ ಚೆಕ್ ಪಾಯಿಂಟ್‌ನಲ್ಲಿಯೂ ಡಿಕ್ಕಿ ಹೊಡೆದ ಲಾರಿಯ ದಾಖಲೆಯ ಕಡತದಲ್ಲಿ ಸಾಮ್ಯತೆ ಕಂಡು ಬಂದಿದ್ದರಿಂದ ದಾಖಲೆಯ ಮೂಲಕ ಚಾಲಕ ಲೋಹಿತ್‌ನ ಮೊಬೈಲ್ ಸಂಖ್ಯೆಯನ್ನು ಹುಡುಕುವಲ್ಲಿ ಯಶಸ್ಸಾದರು ಆತನ ಮೊಬೈಲ್ ದಾಖಲೆಯನ್ನು ಪರಿಶೀಲಿಸಿದಾಗ ಅಪಘಾತ ನಡೆಸಿದ ನಂತರ ಆತ ತನ್ನ ಮೊಬೈಲನ್ನು ಮೂರು ದಿನಗಳ ಕಾಲ ಬಂದ್ ಮಾಡಿಟ್ಟಿದ್ದನು ಎಂದು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಕ್ಕಿ ಹೊಡೆದ ನಂತರ ಲಾರಿಯ ಹಿಂದಿನ ನಂಬರ್ ಪ್ಲೇಟ್‌ನ್ನು ಸಹ ಕಿತ್ತಿದ್ದು ಇದನ್ನು ಉಡುಪಿ ಪೊಲೀಸರು ಗಮನಿಸಿದ್ದರು ಎಂದು ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ. ಡಿಕ್ಕಿ ಹೊಡೆದ ಸಂದರ್ಭ ಬ್ಯಾರಿಗೇಡ್‌ಗೆ ಡಿಕ್ಕಿ ಹೊಡೆದ ಕುರುಹು ಸಹ ಲಾರಿಯಲ್ಲಿ ಕಂಡು ಬಂದಿದೆ. ಆರೋಪಿ ಚಾಲಕ ಲೋಹಿತ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆತನಿಗೆ ನ್ಯಾಯಾಲಯ ಜಾಮೀನು ನೀಡಿದೆ ಅಪಘಾತಕ್ಕೆ ಕಾರಣವಾದ ಲಾರಿ ಈಗ ಪೊಲೀಸರ ವಶದಲ್ಲಿದೆ.
ಮೃತ ಶಿವರಾಜಪ್ಪ ಮೂಲತಹ ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಅರಬಕಟ್ಟೆಯ ನಿವಾಸಿಯಾಗಿದ್ದು ಕಳೆದ 2008ರಲ್ಲಿ ಸುಳ್ಯ ಠಾಣೆಗೆ ನಿಯುಕ್ತಿಗೊಳ್ಳುವ ಮೂಲಕ ಪೊಲೀಸ್ ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2011ರಲ್ಲಿ ಮೂಲ್ಕಿ ಠಾಣೆಗೆ ವರ್ಗಾವಣೆಗೊಂಡು ನಿಷ್ಠಾವಂತ ಪೊಲೀಸ್ ಪೇದೆಯಾಗಿದ್ದರು.

Kinnigoli29051303

Kinnigoli29051304

Comments

comments

Leave a Reply

Read previous post:
ಮೂಲ್ಕಿ- ಮನೆ ಬಾಗಿಲಿಗೆ ಭಾರತ್ ಬ್ಯಾಂಕ್; ಜಯ ಸುವರ್ಣ

Prakash suvarna, Narendra Kerekad ಮೂಲ್ಕಿ; ಕೇವಲ 37 ವರ್ಷದಲ್ಲಿಯೇ 53 ಶಾಖೆಗಳನ್ನು ತೆರೆದು ಕ್ಷಿಪ್ರಗತಿಯಲ್ಲಿ ಸಾಧನೆ ಮಾಡಿರುವ ಭಾರತ್ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ 33 ಪ್ರಶಸ್ತಿಗಳನ್ನು ಪಡೆದಿದ್ದು...

Close