ಮೂಲ್ಕಿ- ಮನೆ ಬಾಗಿಲಿಗೆ ಭಾರತ್ ಬ್ಯಾಂಕ್; ಜಯ ಸುವರ್ಣ

Prakash suvarna, Narendra Kerekad

ಮೂಲ್ಕಿ; ಕೇವಲ 37 ವರ್ಷದಲ್ಲಿಯೇ 53 ಶಾಖೆಗಳನ್ನು ತೆರೆದು ಕ್ಷಿಪ್ರಗತಿಯಲ್ಲಿ ಸಾಧನೆ ಮಾಡಿರುವ ಭಾರತ್ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ 33 ಪ್ರಶಸ್ತಿಗಳನ್ನು ಪಡೆದಿದ್ದು ಕೋ ಆಪರೇಟಿವ್ ಬ್ಯಾಂಕ್‌ಗಳಲ್ಲಿ ಭಾರತದಲ್ಲಿಯೇ ಸರ್ವಶ್ರೇಷ್ಠ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದ್ದು ಮನೆ ಮನೆಗೆ ತೆರಳಿ ಖಾತೆಗಳನ್ನು ಮಾಡಿ ಬಾಗಿಲಿಗೆ ಬ್ಯಾಂಕ್‌ನ್ನು ಕೊಂಡೊಯ್ದ ಸಾಧನೆಯೇ ಇದರ ಹಿಂದಿದೆ ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಜಯ ಸಿ.ಸುವರ್ಣ ಹೇಳಿದರು.
ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮೂಲ್ಕಿಯ ಆಸುಪಾಸಿನ ಜನತೆಯ ಬಹು ದಿನಗಳ ಬೇಡಿಕೆಯಾದ ಭಾರತ್ ಬ್ಯಾಂಕ್‌ನ ನೂತನ ಶಾಖೆಯನ್ನು ಮೇ 30 ರಂದು ಬಸ್ ನಿಲ್ದಾಣದಲ್ಲಿರುವ ಶಾಂಭವಿ ವಾಣಿಜ್ಯ ಕಟ್ಟಡದಲ್ಲಿ ತೆರೆಯಲಾಗುವುದು, ಅಂದು 6ಸಾವಿರ ಖಾತೆಗಳನ್ನು ಹಾಗೂ 20 ಕೋಟಿ ಠೇವಣಿಯನ್ನು ಸಂಗ್ರಹಿಸುವ ಗುರಿ ಹೊಂದಿದ್ದು ಇದರಲ್ಲಿ ಈಗಾಗಲೇ ಶೇ.90ಭಾಗ ತಲುಪಿದ್ದೇವೆ. ಮುಂದಿನ ದಿನದಲ್ಲಿ ಜಿಲ್ಲೆಯ ಮಂಗಳೂರಿನ ಕಂಕನಾಡಿ ಮತ್ತು ಉಜಿರೆಯಲ್ಲಿ ಶಾಖೆಯನ್ನು ತೆರೆಯಲಿದ್ದು, ಮುಂಬಯಿಯಲ್ಲಿ ಎರಡು ಹಾಗೂ ಗುಜರಾತ್‌ನಲ್ಲಿ ಎಂಟು ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು ಎಂದರು.
ಉಪ ಮಹಾಪ್ರಬಂಧಕರಾದ ನಿತ್ಯಾನಂದ ಡಿ. ಕೋಟ್ಯಾನ್ ಮಾಹಿತಿ ನೀಡಿ ಮುಂಬಯಿ ಬಿಲ್ಲವರ ಅಸೋಸಿಯೇಶನ್‌ನಿಂದ ಪ್ರವರ್ತಿತ ಈ ಭಾರತ್ ಬ್ಯಾಂಕ್ ಎಲ್ಲಾ ಸಮಾಜದ ವರ್ಗದವರಿಂದ ಸಹಕಾರ ದೊರೆತಿದ್ದರಿಂದ ಇಂದು ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು 8700 ಕೋಟಿ ವ್ಯವಹಾರವನ್ನು ಮಾಡಿರುವ ಬ್ಯಾಂಕ್  5105.52 ಕೋಟಿ ಠೇವಣಿ ಹೊಂದಿದೆ, ಆರ್ಥಿಕ ವರದಿಯನ್ನು ಕೇವಲ 48 ದಿನಗಳಲ್ಲಿ ಪರಿಪೂರ್ಣ ಗೊಳಿಸಿದ ದಾಖಲೆ ಈ ಬಾರಿ ಮಾಡಿದ್ದು ಜನರ ವಿಶ್ವಾಸಗಳಿಸಲು ಪಾರದರ್ಶಕತೆಯಿಂದ ಕಾರ್ಯೋನ್ಮುಖರಾಗಿದ್ದೇವೆ, ಲಾಭಾಂಶದ ಒಂದು ಭಾಗವನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಕೇಂದ್ರ ಸರ್ಕಾರದ ಸಹಾಯ ನಿಧಿಗೆ ಅರ್ಪಿಸುವ ಮನೋಭಾವನೆಯನ್ನು ನಿರಂತರವಾಗಿ ಪಾಲಿಸಿಕೊಂಡು ಬಂದಿದ್ದೇವೆ ಎಂದರು.
ಮೂಲ್ಕಿಯಲ್ಲಿನ ನೂತನ ಶಾಖೆಯನ್ನು ಬ್ಯಾಂಕಿನ ಮಾಜಿ ಅಧ್ಯಕ್ಷ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಉದ್ಘಾಟಿಸುವರು. ಬ್ಯಾಂಕಿಂಗ್ ವ್ಯವಹಾರವನ್ನು ಬ್ಯಾಂಕಿನ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಚಾಲನೆ ನೀಡುವರು, ಎಟಿಎಂನ್ನು ಉಪಾಧ್ಯಕ್ಷೆ ರೋಹಿಣಿ ಜೆ.ಸಾಲ್ಯಾನ್ ಉದ್ಘಾಟಿಸುವರು. ಭದ್ರತಾ ಕೊಠಡಿಯನ್ನು ಪುಷ್ಪಲತಾ ಎನ್.ಸಾಲ್ಯಾನ್ ಉದ್ಘಾಟಿಸುವರು ಎಂದು ಹೇಳಿದರು.
ಮುಂಬಯಿ ಬಿಲ್ಲವ ಅಸೋಸಿಯೇಶನ್‌ ಉಪಾಧ್ಯಕ್ಷ ಸಿ.ಟಿ.ಸಾಲ್ಯಾನ್, ಬ್ಯಾಂಕ್‌ ನಿರ್ದೇಶಕ ಭಾಸ್ಕರ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಸಹಾಯಕ ಪ್ರಬಂಧಕ ಮೋಹನ್ ದಾಸ್ ಹೆಜ್ಮಾಡಿ, ಹಿರಿಯ ಪ್ರಬಂಧಕ ಬಾಲಕೃಷ್ಣ ಕರ್ಕೇರಾ, ಮೂಲ್ಕಿ ಶಾಖೆ ಪ್ರಬಂಧಕ ಲಕ್ಷ್ಮೀನಾರಾಯಣ, ಶಾಖಾ ಅಭಿವೃದ್ದಿ ಸಹಾಯಕ ಪ್ರಬಂಧಕ ಸುನಿಲ್ ಗುಜರನ್ ಹಾಜರಿದ್ದರು.

Kinnigoli29051301

Kinnigoli29051302

Comments

comments

Leave a Reply