ಮೂಲ್ಕಿ : 53ನೇ ಭಾರತ್ ಬ್ಯಾಂಕ್ ಶಾಖೆ ಉದ್ಘಾಟನೆ

Narendra Kerekadu

ಮೂಲ್ಕಿ : ಸಹಕಾರ ಹಾಗೂ ಸ್ಪಂದನದ ಮನೋಭಾವನೆಯಿಂದ ಭಾರತ್ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠೆ ಪಡೆದುದರ ಹಿಂದೆ ಜನಪರ ಚಿಂತನೆ ಹಾಗೂ ತತ್ವ ನಿಷ್ಠೆಯನ್ನು ಅನುಸರಿಸಿಕೊಂಡು ಬಂದಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಆರಂಭದಲ್ಲಿ ನೀಡಿದ ಸಲಹೆ ಹಾಗೂ ಪ್ರೋತ್ಸಾಹವೇ ಇಂದು ಭಾರತ್ ಬ್ಯಾಂಕ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‌ನ ನಿಕಟ ಪೂರ್ವ ಅಧ್ಯಕ್ಷ ಜಯ ಸಿ. ಸುವರ್ಣ ಹೇಳಿದರು.
ಮೂಲ್ಕಿ ಬಸ್ ನಿಲ್ದಾಣದ ಬಳಿಯ ಶಾಂಭವಿ ವಾಣಿಜ್ಯ ಕಟ್ಟಡದಲ್ಲಿ ಗುರುವಾರ ಭಾರತ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿಂಗ್ ವ್ಯವಹಾರವನ್ನು ಬ್ಯಾಂಕಿನ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್‌ರ ಸಹಕಾರದಲ್ಲಿ ಮುಂಬಯಿಯ “ಕರ್ನಾಟಕ ಮಲ್ಲ” ದಿನ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಚಾಲನೆ ನೀಡಿದರು. ಎಟಿಎಂನ್ನು ಬ್ಯಾಂಕಿನ ಉಪಾಧ್ಯಕ್ಷೆ ರೋಹಿಣಿ ಜೆ.ಸಾಲ್ಯಾನ್ ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಬ್ಯಾಂಕಿನ ನಿರ್ದೇಶಕಿ ಪುಷ್ಪಲತಾ ಎನ್.ಸಾಲ್ಯಾನ್ ಉದ್ಘಾಟಿಸಿದರು.
ಮುಂಬಯಿ ಬಿಲ್ಲವ ಅಸೋಸಿಯೇಶನ್‌ನ ಉಪಾಧ್ಯಕ್ಷ ಸಿ.ಟಿ.ಸಾಲ್ಯಾನ್, ಬ್ಯಾಂಕ್‌ನ ನಿರ್ದೇಶಕರಾದ ಎಂ.ಬಿ.ಕುಕ್ಯಾನ್, ಎಲ್.ವಿ ಅಮೀನ್, ರಾಜಾ ವಿ.ಸಾಲ್ಯಾನ್, ಜ್ಯೋತಿ ಕೆ.ಸುವರ್ಣ, ಎಂ.ಬಿ.ಸನಿಲ್, ವೈ. ನಾಗೇಶ್, ಶೇಖರ್ ಎಂ.ಕೋಟ್ಯಾನ್, ಮೋಹನ್ ಜಿ.ಸುವರ್ಣ, ಭಾಸ್ಕರ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಶಂಕರ್ ಡಿ.ಪೂಜಾರಿ, ಜೆ.ವಿ.ಕೋಟ್ಯಾನ್, ಎನ್.ನಿತ್ಯಾನಂದ್, ರೋಹಿತಾಕ್ಷ ಎಂ.ಸುವರ್ಣ, ರತನ್ ಉಮೇಶ್ ಸನಿಲ್, ಕೆ.ನಾರಾಯಣ ಸುವರ್ಣ, ಜಯ ಐತಪ್ಪ ಕೋಟ್ಯಾನ್, ಮುಖ್ಯ ನಿರ್ವಹಣಾ ಅಧಿಕಾರಿ ಸಿ.ಆರ್.ಮೂಲ್ಕಿ, ಮುಖ್ಯ ಮಹಾಪ್ರಬಂಧಕ ಅನಿಲ್ ಕುಮಾರ್ ಆರ್. ಅಮೀನ್, ಸಹಾಯಕ ಪ್ರಬಂಧಕ ಮೋಹನ್ ದಾಸ್ ಹೆಜ್ಮಾಡಿ, ಹಿರಿಯ ಪ್ರಬಂಧಕ ಬಾಲಕೃಷ್ಣ ಕರ್ಕೇರಾ, ಮೂಲ್ಕಿ ಶಾಖೆಯ ಪ್ರಬಂಧಕ ಲಕ್ಷ್ಮೀ ನಾರಾಯಣ, ಶಾಖಾ ಅಭಿವೃದ್ದಿ ಸಹಾಯಕ ಪ್ರಬಂಧಕ ಸುನಿಲ್ ಗುಜರನ್, ದುಬೈ ಬಿಲ್ಲವಾಸ್‌ನ ಅಧ್ಯಕ್ಷ ಜಿತೇಂದ್ರ ಸುವರ್ಣ, ಹೆಚ್.ವಿ.ಕೋಟ್ಯಾನ್ ಮೂಲ್ಕಿ, ಮೂಲ್ಕಿ ನಗರ ಪಂಚಾಯಿತಿಯ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಕುಂದಾಪುರದ ಕಾಳಪ್ಪಣ್ಣ, ಜೆ.ವಿ.ಸನ್ಸ್‌ನ ಸೀತಾರಾಮ, ಜಿನರಾಜ್ ಹೆಜ್ಮಾಡಿ, ಶಶೀಂದ್ರ ಸಾಲ್ಯಾನ್ ಹಳೆಯಂಗಡಿ, ಮುದ್ದು ಸಾಲ್ಯಾನ್, ಆರ್.ಎಸ್.ಕೋಟ್ಯಾನ್ ಕೆಂಚನಕೆರೆ, ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಲೀಲಾವತಿ ಜಯ ಸುವರ್ಣ, ಬಿ.ಟಿ.ಸಾಲ್ಯಾನ್ ಬೆಂಗಳೂರು, ರವಿ ಪೂಜಾರಿ ಮಂಗಳೂರು, ಸೂರ್ಯಕಾಂತ್ ಸುವರ್ಣ, ಸಿ.ಟಿ.ಸಾಲ್ಯಾನ್, ಜಿ.ಎಂ.ಕೋಟ್ಯಾನ್, ಆರ್.ಡಿ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Mulki31051301

Mulki31051302

Mulki31051303

Mulki31051304

Mulki31051305

Comments

comments

Leave a Reply

Read previous post:
ಕೆ.ಅಭಯಚಂದ್ರಜೈನ್ ಅಭಿನಂದನಾ ಕಾರ್ಯಕ್ರಮ

Narendra Kerekadu ಮೂಲ್ಕಿ; "ತಾನು ಸಚಿವನಾದರು ಇಂದಿಗೂ ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತನಾಗಿರಲು ಬಯಸುತ್ತೇನೆ, ಅಧಿಕಾರ ಇದ್ದರು, ಇಲ್ಲಿದಿದ್ದರೂ ಜನಸೇವಕನಾಗಿರುತ್ತೇನೆ". ಮೂಡಬಿದಿರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವಿಗೆ ಕಾರಣರಾದ ಕಾರ್ಯಕರ್ತರು...

Close