ಪುನರೂರು- “ನೃತ್ಯಾವಧಾನ” ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ಪಾಶ್ಚಾತ್ಯೀಕರಣದ ಭರಾಟೆಯಲ್ಲಿ ಭಾರತೀಯ ಕಲೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಈ ನಿಟ್ಟಿನಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಉಳಿಸಿ, ಬೆಳೆಸುವ ಅವಶ್ಯಕತೆ ಇದೆ ಎಂದು ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮಿ ಆಳ್ವ ಹೇಳಿದರು.

ಸೋಮವಾರ ಪುನರೂರು ಶ್ರೀ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ “ನೃತ್ಯಾವಧಾನ” 5 ದಿನಗಳ ನೃತ್ಯ ಕಾರ್ಯಾಗಾರ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜ್ಞಾನ, ಕಲೆ, ಕಲಿಕೆಗೆ ಇತಿಮಿತಿ ಇಲ್ಲ, ತಿಳಿಯುವುದು ಬಹಳಷ್ಟು ಇದೆ. ಸೃಜನ ಶೀಲತೆಯ ಈ ಕಾರ್ಯಗಾರದಲ್ಲಿ ಭಾಗವಹಿಸಿದರೆ ಎಲ್ಲಾ ಪ್ರಕಾರಗಳನ್ನು ಕಲಿತು ಜ್ಞಾನ ವಿಸ್ತರಿಸಿಕೊಳ್ಳಬಹುದು. ಎಂದು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಅಧ್ಯಕ್ಷ ಪಿ. ಕಮಲಾಕ್ಷಾಚಾರ್ ಹೇಳಿದರು.

ಯುವಪೀಳಿಗೆಯು ಭಾರತೀಯ ಶಾಸ್ತ್ರೀಯ ನೃತ್ಯಗಳ ಬಗ್ಗೆ ಅರಿಯುವುದು ಬಹುಮುಖ್ಯ. ದೇಹ, ಭಾವನೆ ಮತ್ತು ನಮ್ಮತನಗಳನ್ನು ನಾವು ಅರಿಯುವ ಬಗೆಯನ್ನು ಕಲಿತುಕೊಳ್ಳಬಹುದು. ಅಭ್ಯಾಸ, ಚಿಂತನೆ, ಆಸಕ್ತಿ, ಅನುಭವಗಳಿಂದ ನೃತ್ಯ ಕಲೆ ಪ್ರಖರಗೊಳ್ಳುವುದು. ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಆರತಿ ಶೆಟ್ಟಿ ಪ್ರಾರ್ಥಿಸಿದರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ 7ರಿಂದ ಸಂಜೆ 8.30ರವರೆಗೆ ಗುರುಗಳಾದ ಪದ್ಮಿನಿ ರಾಮಚಂದ್ರನ್-ಭರತನಾಟ್ಯ, ಲಕ್ಷ್ಮೀ ರಾಜಾಮಣಿ-ಕೂಚಿಪುಡಿ, ಜಯಂತಿ ಈಶ್ವರ ಪುತ್ತಿ-ಕಥಕ್, ಇಂದಿರಾ ಕಡಾಂಬಿ-ಅಭಿನಯ, ಈ ನೃತ್ಯ ಪ್ರಕಾರಗಳಲ್ಲಿ ತರಬೇತಿಯನ್ನು ನೀಡಲಾಗುವುದು. ನೃತ್ಯದ ಜೊತೆಗೆ ಪ್ರತಿ ನಿತ್ಯವೂ ಯೋಗಾಭ್ಯಾಸ, ನೃತ್ಯ ಪಾಠವನ್ನು ಡಾ|| ಕರುಣಾ ವಿಜಯೇಂದ್ರ, ನಂದಿನಿ ಈಶ್ವರ್ ಮತ್ತು ಎಮ್.ಎಲ್.ಸಾಮಗ ಅವರಿಂದ ಏರ್ಪಡಿಸಲಾಗಿದೆ.

Kinnigoli03061303

Kinnigoli03061304

Comments

comments

Leave a Reply

Read previous post:
ಬಿಜೆಪಿ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ

ಕಿನ್ನಿಗೋಳಿ: ಅಡಿಕೆ ಕೃಷಿಯ ಬಗ್ಗೆ ತಜ್ಞರಲ್ಲಿ ಚರ್ಚಿಸಿ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಗುಟ್ಕಾ ನಿಷೇಧ ಜಾರಿ ಮಾಡುವ ಚಿಂತನೆ ಮಾಡಬೇಕು. ದ್ವೇಷದ ರಾಜಕಾರಣ ಸಲ್ಲದು. ಎಂದು...

Close