ಬಳ್ಕುಂಜೆ: ನವಜೀವನ ಸಮಿತಿ “ಶತದಿನೋತ್ಸವ”

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ ಮದ್ಯವರ್ಜನ ಶಿಬಿರಗಳ ಮೂಲಕ ಹಲವು ಕುಟುಂಬಗಳಿಗೆ ನವಜೀವನ ನೀಡಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಸಾರಕ್ಕೆ ಬೆಳಕನ್ನು ನೀಡಿದ ಈ ಶಿಬಿರಗಳಿಂದ ಶ್ಲಾಘನೀಯ ಕಾರ್ಯವಾಗಿದೆ ಎಂದು ಬಳ್ಕುಂಜೆ ಸಂತ ಪೌಲರ ಚರ್ಚ್ ಧರ್ಮಗುರು ಮೈಕಲ್ ಡಿಸಿಲ್ವಾ ಹೇಳಿದರು.
ಬಳ್ಕುಂಜೆ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆದ 548ನೇ ಮದ್ಯವರ್ಜನ ಶಿಬಿರದ ನವಜೀವನ ಸಮಿತಿ ಸದಸ್ಯರ “ಶತದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಳ್ಕುಂಜೆ ಸ್ವ.ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮದ್ಯಪಾನದಿಂದಾಗುವ ಕೆಡುಕಿನ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಬೇಕು. ಸಮಾಜದಲ್ಲಿ ಮದ್ಯಪಾನ ದುಶ್ಚಟವಾಗಿ ಗ್ರಾಮದ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿದೆ. ಮದ್ಯಪಾನದ ವಿರುದ್ಧ ಧ. ಗ್ರಾ. ಯೋಜನೆ ಹಾಗೂ ಹಲವು ಸಂಘಟನೆಗಳ ಸಹಭಾಗಿತ್ವದ ಮದ್ಯವರ್ಜನ ಶಿಬಿರಗಳ ಕಾರ್ಯ ಮೆಚ್ಚುವಂತದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ರಾಘವ.ಎಂ, ತಾಲೂಕು ಪಂ.ಸದಸ್ಯ ನೆಲ್ಸನ್ ಲೋಬೊ, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ರಾಘವೇಂದ್ರ ಆಚಾರ್ಯ, ಕಿನ್ನಿಗೋಳಿ ವಲಯ ಮೇಲ್ವಿಚಾರಕ ಪ್ರದೀಪ್, ಒಕ್ಕೂಟ ಅಧ್ಯಕ್ಷ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಸೇವಾನಿರತ ದೇವೇಂದ್ರ ಸ್ವಾಗತಿಸಿ, ಉದಯ ನಾಯ್ಕ ವಂದಿಸಿದರು. ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಉಲ್ಲಂಜೆ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವತಿಯಿಂದ ಉಲ್ಲಂಜೆ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ನೀಡಲಾಯಿತು. ಶ್ರೀ ವೀರಮಾರುತಿ ವ್ಯಾಯಾಮ...

Close