ಮೂಲ್ಕಿ: ಪ್ರಾಣಯೋಗ ತರಬೇತಿ ಶಿಬಿರ

Bhagyavan Sanil
ಮೂಲ್ಕಿ: ರೋಟರಿ ಕ್ಲಬ್ ಮುಲ್ಕಿ ಮತ್ತು ಪತಂಜಲಿ ಯೋಗ ಸಮಿತಿ ಮುಲ್ಕಿ ಇವುಗಳ ಆಶ್ರಯದಲ್ಲಿ ಒಂದು ವಾರದ ಪ್ರಾಣಯೋಗ ತರಬೇತಿ ಶಿಬಿರವು ಪ್ರಾರಂಭಗೊಂಡಿದೆ. ಈ ಶಿಬಿರ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ಮಾನಸಿಕ ಢೃಡತೆ ಹೆಚ್ಚಿಸಲು ಹಾಗೂ ಆರೋಗ್ಯವಂತರಾಗಿ ವಿದ್ಯಾಬ್ಯಾಸದಲ್ಲಿ ಉನ್ನತಿಗಳಿಸಲು ಸಹಕಾರಿಯಾಗುವಂತೆ ರೂಪಿಸಲಾಗಿದ್ದು ಮುಲ್ಕಿ ಸೈಂಟ್ ಆನ್ಸ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಪ್ರಾಯೋಜಿಸಿದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೂ ಇದರ ಪ್ರಯೋಜನವನ್ನು ಪಡೆಯ ಬಹುದಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಯೋಗ ಗುರು ಎನ್.ಪಿ.ಶೆಟ್ಟಿ ಹೇಳಿದರು.
ರೋಟರಿ ಕ್ಲಬ್ ಮುಲ್ಕಿ ಇದರ ನಿಯೋಜಿತ ಅಧ್ಯಕ್ಷ ಅಬ್ದುಲ್ ರಹಿಮಾನ್ ಇವರು ಅಧ್ಯಕ್ಷತೆ ವಹಿಸಿದ್ದು, ಶಿಬಿರದ ಉದ್ಘಾಟನಾ ಸಭೆಯಲ್ಲಿ ಸೈಂಟ್ ಆನ್ಸ್ ನರ್ಸಿಂಗ್ ಕಾಲೇಜಿನಿ ಸಹ ಉಪನ್ಯಾಸಕಿ ರೇಷ್ಮಾ ಸುಶ್ಮಿತ ಮಾಬೆನ್ ಅಥಿತಿಯಾಗಿದ್ದರು. ಯೋಗ ಗುರುಗಳಾಗಿ ಎನ್.ಪಿ. ಶೆಟ್ಟಿ ಮತ್ತು ಜಯ ಎಮ್. ಶೆಟ್ಟಿ ಮಾರ್ಗರ್ದನ ನೀಡುತ್ತಿದ್ದಾರೆ.

Mulki 05061301

Comments

comments

Leave a Reply

Read previous post:
ಕಟೀಲು : ಪುಸ್ತಕ ವಿತರಣೆ

Mithuna Kodethoor ಕಿನ್ನಿಗೋಳಿ: ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ 200ವಿದ್ಯಾರ್ಥಿಗಳಿಗೆ ಸುಮಾರು 60ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಕಟೀಲು ಸ್ಪೋರ್ಟ್ಸ್ ಮತ್ತು...

Close